ಮನೆಯಲ್ಲೇ ಶುದ್ಧ ಕುಂಕುಮ ತಯಾರಿಸುವ ವಿಧಾನ ಕಲಿಯಲು ಅವಕಾಶ
ಯಲ್ಲಾಪುರ: ಸನಾತನ ಸಂಸ್ಕೃತಿಯಲ್ಲಿ ಶ್ರದ್ಧೆ ಮತ್ತು ಪಾವಿತ್ರ್ಯದ ಪ್ರತೀಕವಾಗಿರುವ ಕುಂಕುಮವನ್ನು ಮನೆಯಲ್ಲೇ ಸಾಂಪ್ರದಾಯಿಕ ವಿಧಾನದಲ್ಲಿ, ಶುದ್ಧವಾಗಿ ತಯಾರಿಸುವ ಕುರಿತು ವಿಶೇಷ ಕಾರ್ಯಾಗಾರವನ್ನು ಯಲ್ಲಾಪುರದಲ್ಲಿ ಆಯೋಜಿಸಲಾಗಿದೆ.
ಥ್ಯಾಂಕ್ ಯೂ ಯೂನಿವರ್ಸ್ ಅಕಾಡೆಮಿ ವತಿಯಿಂದ ವಿವಿಧ ಸಂಘ–ಸಂಸ್ಥೆಗಳ ಸಹಕಾರದೊಂದಿಗೆ ಆ.23ರಂದು ಭಾನುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 12.30ರವರೆಗೆ ನಗರದ ಅಡಿಕೆ ಭವನದಲ್ಲಿ ಈ ವಿಶೇಷ ಕಾರ್ಯಾಗಾರ ನಡೆಯಲಿದೆ.
ಮನೆಯಲ್ಲೇ ಶುದ್ಧ ಹಾಗೂ ಸಾಂಪ್ರದಾಯಿಕ ವಿಧಾನದಲ್ಲಿ ಕುಂಕುಮ ತಯಾರಿಸುವ ಕುರಿತು ಕಾರ್ಯಾಗಾರದಲ್ಲಿ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ನೀಡಲಾಗುತ್ತದೆ. ಕುಂಕುಮದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವದ ಜೊತೆಗೆ, ಸಾಂಪ್ರದಾಯಿಕವಾಗಿ ಅದನ್ನು ತಯಾರಿಸುವ ವಿಧಾನವನ್ನು ತಿಳಿದುಕೊಳ್ಳಲು ಇದು ಅವಕಾಶವಾಗಲಿದೆ.
ಕುಂಕುಮವನ್ನು ಮನೆಯಲ್ಲೇ ತಯಾರಿಸಿ ಬಳಸಲು ಆಸಕ್ತಿ ಹೊಂದಿರುವ ಸಾರ್ವಜನಿಕರು ಕಾರ್ಯಾಗಾರದಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಆಯೋಜಕರು ಕೋರಿದ್ದಾರೆ.
ಕಾರ್ಯಕ್ರಮಕ್ಕೆ ಆರ್ಟ್ ಆಫ್ ಲಿವಿಂಗ್ ಯಲ್ಲಾಪುರ ಘಟಕ, ಶ್ರೀ ಮಹಾಗಣಪತಿ ಕಲಾ ಬಳಗ ಹುತ್ಕಂಡ ಕ್ರಾಸ್, ಓಂಕಾರ ಯೋಗ ಕೇಂದ್ರ ಹಾಗೂ ವಿಹಿಂಪ ಮಾತೃಮಂಡಳಿ ಯಲ್ಲಾಪುರ ಸಹಕಾರ ನೀಡುತ್ತಿವೆ.
ಹೆಚ್ಚಿನ ಮಾಹಿತಿಗಾಗಿ 9945579633 / 9482185480 ಸಂಪರ್ಕಿಸಬಹುದು ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.