Friday, July 24, 2026
Join WhatsApp Group
HomeLocal Newsಯುಗಾದಿ ಉತ್ಸವ; ಸಂಘಟಕರಿಗೆ ಸಮಿತಿಯ ಅಭಿನಂದನೆ

ಯುಗಾದಿ ಉತ್ಸವ; ಸಂಘಟಕರಿಗೆ ಸಮಿತಿಯ ಅಭಿನಂದನೆ

ಯಲ್ಲಾಪುರ: ಯುಗಾದಿ ಉತ್ಸವ ಸಮಿತಿ, ಯಲ್ಲಾಪುರದ 26ನೇ ವರ್ಷದ ಯುಗಾದಿ ಉತ್ಸವದ ಲೆಕ್ಕಪತ್ರ ಸಭೆಯು ಭಾನುವಾರ ಪಟ್ಟಣದ ವೆಂಕಟರಮಣ ಮಠದಲ್ಲಿ ನಡೆಯಿತು.

ಸಮಿತಿಯ ಅಧ್ಯಕ್ಷ ವಿಶಾಲ್ ವಾಳಂಬೆ ಅಧ್ಯಕ್ಷತೆ ವಹಿಸಿ, ಉತ್ಸವದ ಜಮಾ-ಖರ್ಚಿನ ವಿವರವನ್ನು ಸಭೆಗೆ ಮಂಡಿಸಿದರು.

ಈ ವೇಳೆ ಮಾತನಾಡಿದ ಉಪಾಧ್ಯಕ್ಷ ಆರ್.ಎಸ್. ಭಟ್ ಚಂದಗುಳಿ, 26ನೇ ವರ್ಷದ ಯುಗಾದಿ ಉತ್ಸವವು ಹಿಂದಿನ ವರ್ಷಗಳಿಗಿಂತ ಹೆಚ್ಚು ವಿಜೃಂಭಣೆಯಿಂದ ಹಾಗೂ ಯಶಸ್ವಿಯಾಗಿ ನಡೆದಿದ್ದು, ಇದಕ್ಕೆ ಸಹಕರಿಸಿದ ಎಲ್ಲ ಸಂಘಟಕರು, ದಾನಿಗಳು ಮತ್ತು ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.

ಮತ್ತೋರ್ವ ಉಪಾಧ್ಯಕ್ಷ ಗಜಾನನ ಭಟ್ ಕಳಚೆ ಮಾತನಾಡಿ, ಉತ್ಸವದ ಯಶಸ್ಸಿಗೆ ತನು-ಮನ-ಧನದಿಂದ ಸಹಕರಿಸಿದ ಎಲ್ಲರ ಸಹಾಯ-ಸಹಕಾರವನ್ನು ಸ್ಮರಿಸಿ ಕೃತಜ್ಞತೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಉಪಾಧ್ಯಕ್ಷರಾದ ಮಹೇಶ ನಾಯ್ಕ, ರಾಮು ಆಚಾರಿ, ಗಣೇಶ ದೇವಾಡಿಗ, ಸತೀಶ್‌ ನಾಯ್ಕ ಹಾಗೂ ಕಾರ್ಯದರ್ಶಿ ಸಿದ್ದಾರ್ಥ ನಂದೊಳ್ಳಿಮಠ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share