Friday, July 24, 2026
Join WhatsApp Group
HomeLocal Newsಭಾರದ್ವಾಜಾಶ್ರಮದಲ್ಲಿ ಮಾ.25ರಿಂದ ಧಾರ್ಮಿಕ ಕಾರ್ಯಕ್ರಮ

ಭಾರದ್ವಾಜಾಶ್ರಮದಲ್ಲಿ ಮಾ.25ರಿಂದ ಧಾರ್ಮಿಕ ಕಾರ್ಯಕ್ರಮ

ಯಲ್ಲಾಪುರ: ತಾಲೂಕಿನ ನಂದೊಳ್ಳಿಯ ಭಟ್ರಕೇರಿಯಲ್ಲಿರುವ ಶ್ರೀ ಭಾರದ್ವಾಜಾಶ್ರಮದಲ್ಲಿ ರಾಷ್ಟ್ರಕ್ಷೇಮ ಹಾಗೂ ವಿಶ್ವಶಾಂತಿಯ ಸಂಕಲ್ಪದೊಂದಿಗೆ ಆರ್ಷವಿದ್ಯಾ ಟ್ರಸ್ಟ್ ವತಿಯಿಂದ 360ನೇ ಅನುಷ್ಠಾನ ಮತ್ತು ಅಕ್ಷರ ಕೋಟಿ ರಾಮತಾರಕ ಜಪಯಜ್ಞದ ಮಹಾಸಮರ್ಪಣೆ ಕಾರ್ಯಕ್ರಮವು ಮಾರ್ಚ್ 25ರಿಂದ 27ರವರೆಗೆ ನಡೆಯಲಿದೆ.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅಕ್ಷರ ಕೋಟಿ ರಾಮತಾರಕ ಜಪಯಜ್ಞದ ಮಹಾಸಮರ್ಪಣೆ, ಒಂದು ಲಕ್ಷ ರಾಮತಾರಕ ಮಂತ್ರ ಹವನ, ವೇದ ಪಾರಾಯಣ, ಅಥರ್ವಶೀರ್ಷ ಹವನ, ಚಂಡೀ ಹವನ, ಧನ್ವಂತರಿ ಹವನ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆಗಳು ನೆರವೇರಲಿವೆ.

ಆಯುಷ್ಮಾನ್ ಭವ – ವಿಜಯೀ ಭವ ಬಳಗ (ಕರ್ನಾಟಕ) ಹಾಗೂ ಆರ್ಷವಿದ್ಯಾ ಟ್ರಸ್ಟ್ (ರಿ), ಭಾರದ್ವಾಜಾಶ್ರಮದ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share