Saturday, May 30, 2026
HomeYour Voiceಬದುಕೊಂದು ರೈಲು ಬಂಡಿ!

ಬದುಕೊಂದು ರೈಲು ಬಂಡಿ!

ಇತ್ತೀಚಿನ ಪ್ರಾಪಂಚಿಕ ಜೀವನವೇ ಒಂದು ರೈಲು ಬಂಡಿಯಂತೆಯಾಗಿದೆ. ಎಷ್ಟು ಎಣಿಸಿದರೂ ಮುಗಿಯದ ಬೋಗಿಯಂತೆ ಕಾಣಸಿಗುವ ದಿನದ ಕೆಲಸ ಅಂದರೆ workload.

Workload ಎಂಬ ಪದ ಮಾನವನ ಜೀವನದಲ್ಲಿ ಸಹಜವಾಗಿಬಿಟ್ಟಿದೆ.  ಬೆಳಗ್ಗೆ 9 ಗಂಟೆಗೆ ಪ್ರಾರಂಭವಾದ ಕೆಲಸ ಸಂಜೆ 5 ಗಂಟೆಯಾದರೂ ಮುಗಿಯದು. ಒಮ್ಮೆ ಮುಗಿಯಿತೆಂದು ಮನೆಯ ಕಡೆ ಹೆಜ್ಜೆ ಕಿತ್ತಿಟ್ಟೊಡನೆ ಯಾವುದೋ ಒಂದು ಚಿಕ್ಕ ಕೆಲಸ ಬಾಕಿ ಎಂಬ ಸೂಚನೆ ಎದುರು ಬಂದು, ಒಮ್ಮೆಲೇ ಮುಂದಿಟ್ಟ  ಹೆಜ್ಜೆಯನ್ನೂ ಹಿಂದಿರುಗಿಸುವಂತೆ ಮಾಡಿಬಿಡುತ್ತದೆ.

ಮೊದಲಾದರೆ ಹೆಣ್ಣು ಮನೆಯಲ್ಲೇ ಕೆಲಸ ಮಾಡಬೇಕು, ಗಂಡಾದವರು ಹೊರಗೆ ಹೋಗಿ ದುಡಿಯಬೇಕೆಂಬ ನಿಯಮವಿತ್ತು. ಆದರೆ ಈಗ ಹಾಗಲ್ಲ. ಹೆಣ್ಣು-ಗಂಡು ಇಬ್ಬರೂ ಸಮಾನರು. ಯಾರಲ್ಲೂ ಬೇಧ-ಭಾವವಿಲ್ಲ ಎಂದು ಸಮಾಜವೂ ಸಾರುತ್ತದೆ. ಇಬ್ಬರೂ ಕೆಲಸಕ್ಕೆಂದು ಹಲವು ಕಂಪನಿಗಳನ್ನು ಆಯ್ಕೆ ಮಾಡಿಕೊಳುತ್ತಾರೆ.

ಎಲ್ಲಿ ನೋಡಿದರೂ ಸರ್ಕಾರಿ ನೌಕರಿಯ ಕಛೇರಿಗಳು ಹಾಗೂ ಹತ್ತು ಹಲವು ಖಾಸಗಿ ಕಂಪನಿಗಳು. ಅದರಲ್ಲೂ ಹೆಚ್ಚಾಗಿ ಕಾಣಸಿಗುವ ವಿದೇಶಿ ಮಳಿಗೆಗಳು ಮತ್ತು ಕಂಪನಿಗಳು ಇವೆಲ್ಲದರಲ್ಲೂ ಕೆಲಸಕ್ಕೆಂದು ಹಾತೊರೆಯುತ್ತಾ ಕಾಣಸಿಗುವ ಜನಜಂಗುಳಿ ಇಷ್ಟೆಲ್ಲಾ ಜನಜಾತ್ರೆ ಇದ್ದರೂ  ಎಂದು ಕೂಡ ಕೆಲಸಕ್ಕೆ  ಬರ ಬರಲಿಲ್ಲ!

ಇತ್ತೀಚೆಗಿನ ದಿನಗಳಂತೂ  ಎಂದು ಕೂಡ ಕೆಲಸ ಮುಗಿಯದಾದ ಪರಿಸ್ಥಿತಿಗೆ ಜಗತ್ತು ಬಂದು ತಲುಪಿದೆ. ಎಲ್ಲಿ ಹೋದರೂ ಹೆಚ್ಚುತ್ತಿರುವ ಕೆಲಸದ ಹೊರೆ ಆದರೂ ಒಮ್ಮೊಮ್ಮೆ ನಿರುದ್ಯೋಗ ಸಮಸ್ಯೆ ಎಂಬುದು ಅತಿಯಾಗಿ ಕಾಡುತ್ತಿದ್ದು, ಜಗತ್ತು ಒಮ್ಮೆ ಹಿಮ್ಮುಖವಾಗಿ ನಿಂತಂತೆ ಕಾಣುತ್ತದೆ.

ಆದರೂ ಇತ್ತೀಚಿನ ದಿನಗಳಲ್ಲಿ ಜಗತ್ತೆಂಬುದು  ಕಾಲ್ಪನಿಕತೆಯಿಂದ ಎದ್ದು ತೊರುತ್ತಿದೆ. ಅಂತಹ ಕಾಲ್ಪನಿಕ ಜಗತ್ತಿನಲ್ಲಿ ಓಡುವ ರೈಲಿನ ಬೋಗಿಗಳಲ್ಲಿ ಚಲಿಸುವ ಪ್ರಯಾಣಿಕರು ನಾವಾಗಿದ್ದೇವೆ ಅಲ್ಲವೇ?!

– ದಶ್ಮಿತಾ ಕೆ.ಎಮ್.

ಪತ್ರಿಕೋದ್ಯಮ ವಿದ್ಯಾರ್ಥಿನಿ.

ಎಂಜಿಎಂ ಕಾಲೇಜು, ಉಡುಪಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share