ಶಿರಸಿ: ಸಾರ್ವಜನಿಕ ಸ್ಥಳದಲ್ಲಿ ಓಸಿ ಜೂಜಾಟ ನಡೆಸುತ್ತಿದ್ದ ಆರೋಪದ ಮೇಲೆ ಶಿರಸಿ ಗ್ರಾಮೀಣ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಸಿ–ಯಲ್ಲಾಪುರ ರಸ್ತೆಯ ಬೊಮ್ಮನಳ್ಳಿ ಕ್ರಾಸ್ನ ಕಡವೆ ಬಸ್ಸ್ಟಾಪ್ ಬಳಿ ಆ.11ರಂದು ಸಂಜೆ 7.45ರ ಸುಮಾರಿಗೆ ಕೆಳಗಿನ ಬೊಮ್ಮನಳ್ಳಿ ನಿವಾಸಿ ಯೋಗೇಶ ರಾಮ ಭಂಡಾರಿ (43) ಎಂಬಾತ ಸಾರ್ವಜನಿಕರಿಗೆ ಕೂಗಿ ಕರೆದು, ಓಸಿ ಜೂಜಾಟದ ಅಂಕಿ-ಸಂಖ್ಯೆಗಳ ಮೇಲೆ ಹಣ ಪಣ ಕಟ್ಟುವಂತೆ ಪ್ರೇರೇಪಿಸುತ್ತಿದ್ದ.
ಪೊಲೀಸ್ ಉಪನಿರೀಕ್ಷಕ ಸಂತೋಷಕುಮಾರ ಎಂ ಅವರ ನೇತೃತ್ವದಲ್ಲಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ನಡೆಸಿದಾಗ ಆರೋಪಿತನ ಬಳಿಯಲ್ಲಿ ₹450 ನಗದು, ಒಂದು ಬಾಲ್ಪೆನ್, ಓಸಿ ಅಂಕಿ-ಸಂಖ್ಯೆ ಬರೆದ ಒಂದು ಚೀಟಿ ಪತ್ತೆಯಾಗಿವೆ.