Friday, March 13, 2026
HomeStateಆರ್‌ಎಸ್‌ಎಸ್‌ ದೆವ್ವವಿದ್ದಂತೆ! ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ಆರ್‌ಎಸ್‌ಎಸ್‌ ದೆವ್ವವಿದ್ದಂತೆ! ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ಬೆಂಗಳೂರು: ಆರ್‌ಎಸ್‌ಎಸ್‌ನ್ನು ದೆವ್ವಕ್ಕೆ, ಬಿಜೆಪಿಯನ್ನು ಅದರ ನೆರಳಿಗೆ ಹೋಲಿಸಿ ಸಚಿವ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಗಾಂಧಿ ಭವನದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್ ದೆವ್ವವಿದ್ದಂತೆ, ಬಿಜೆಪಿ ಅದರ ನೆರಳು. ನಾವು ನೆರಳಿನ ಜೊತೆ ಹೋರಾಟ ಮಾಡಬಾರದು, ಬದಲಾಗಿ ದೆವ್ವದ ಜೊತೆ ಹೋರಾಟ ಮಾಡಬೇಕು ಎಂದಿದ್ದಾರೆ.

ಆರ್‌ಎಸ್‌ಎಸ್ ಮುಖ್ಯಸ್ಥರು ಧರ್ಮ ಉಳಿಸಲು ಮೂರು ಮೂರು ಮಕ್ಕಳನ್ನ ಹೆರಬೇಕು ಎನ್ನುತ್ತಾರಾದರೂ, ಅವರು ಮಾತ್ರ ಬ್ರಹ್ಮಚಾರಿಗಳಾಗಿ ಇರುತ್ತಾರೆ!

ಅಮಿತ್ ಶಾ ಅವರು ಸದನದಲ್ಲಿ ಅಂಬೇಡ್ಕರ್ ಹೆಸರು ಹೇಳೋದು ಫ್ಯಾಷನ್ ಆಗಿದೆ ಎಂದು ಹೇಳಿದ್ದಾರೆ. ಪಾರ್ಲಿಮೆಂಟ್‌ನಲ್ಲಿ ಅಮಿತ್ ಶಾ ಹೀಗೆ ಹೇಳೋದು ಅಹಂಕಾರ ಅಲ್ಲವೇ? 57 ವರ್ಷ ಆದರೂ ಆರ್‌ಎಸ್‌ಎಸ್ ನಮ್ಮ ರಾಷ್ಟ್ರೀಯ ಬಾವುಟವನ್ನು ಹಾರಿಸಲಿಲ್ಲ.

ಆರ್‌ಎಸ್‌ಎಸ್‌ಗೆ ಹಣ ಹೇಗೆ ಬರುತ್ತದೆ ಎಂದು ಕೇಳಿದರೆ ಅವರ ಬಳಿ ಉತ್ತರವಿಲ್ಲ. ಕೊನೆಗೆ ಅದಕ್ಕೆ ಉತ್ತರ ಕೊಡಲು ಮೋಹನ್ ಭಾಗವತ್ ಅವರೇ ಬೆಂಗಳೂರಿಗೆ ಬಂದರು. ಆರ್‌ಎಸ್‌ಎಸ್ ನೋದಣಿಯ ಅಗತ್ಯ ಇಲ್ಲ ಎಂದು ಹೇಳುತ್ತಾರೆ. ಇವತ್ತಲ್ಲ ನಾಳೆ ಆರ್‌ಎಸ್‌ಎಸ್ ನೋಂದಣಿ ಆಗಲೇಬೇಕು. ಇಲ್ಲವಾದರೆ ನಾನೇ ಮಾಡಿಸುತ್ತೇನೆ ಎಂದು ಸವಾಲು ಹಾಕಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share