Monday, September 7, 2026
Join WhatsApp Group
HomeLocal Newsಮನೆಯ ಮುಂದೆ ಮಿಡಿ ನಾಗರ; ಅರಣ್ಯಾಧಿಕಾರಿಗಳಿಂದ ಸುರಕ್ಷಿತ ರಕ್ಷಣೆ

ಮನೆಯ ಮುಂದೆ ಮಿಡಿ ನಾಗರ; ಅರಣ್ಯಾಧಿಕಾರಿಗಳಿಂದ ಸುರಕ್ಷಿತ ರಕ್ಷಣೆ

ಮುಂಡಗೋಡ: ತಾಲೂಕಿನ ಕಾತೂರು ವಲಯದ ರಾಮಾಪುರ ಶಾಖೆಯ ಸಿಂಗನಳ್ಳಿ ಗ್ರಾಮದ ಶಾಂತೇಶ್ ಪಾಟೀಲ್ ಅವರ ಮನೆಯ ಮುಂದೆ ಮಿಡಿ ನಾಗರಹಾವು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಮನೆಯ ಮುಂದೆ ನಾಗರಹಾವು ಕಾಣಿಸಿಕೊಂಡಿರುವುದನ್ನು ಗಮನಿಸಿದ ಅರಣ್ಯ ವೀಕ್ಷಕ ಸಂತೋಷ್ ಸಿಂಗನಳ್ಳಿ ಅವರು ದೂರವಾಣಿ ಮೂಲಕ ಪಾಳಾ ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಅವರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ತೆರಳಿದ ಅವರು ಹಾವನ್ನು ಯಾವುದೇ ಅಪಾಯವಾಗದಂತೆ ಸುರಕ್ಷಿತವಾಗಿ ಹಿಡಿದು, ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಟ್ಟರು.

ಕಾರ್ಯಾಚರಣೆಯಲ್ಲಿ ಅರಣ್ಯ ವೀಕ್ಷಕ ಸಂತೋಷ್ ಸೇರಿದಂತೆ ಶಿವಾಜಿ ಪಾಟೀಲ್, ಶಂಬು ಪಾಟೀಲ್ ಹಾಗೂ ಪರಶು ಅಲಳ್ಳಿ ಉಪಸ್ಥಿತರಿದ್ದರು.

ಹಾವುಗಳು ಕಂಡುಬಂದಾಗ ಅವುಗಳನ್ನು ಹಿಡಿಯಲು ಅಥವಾ ಓಡಿಸಲು ಸಾರ್ವಜನಿಕರು ಸ್ವತಃ ಮುಂದಾಗದೆ, ಅರಣ್ಯ ಇಲಾಖೆ ಅಥವಾ ತರಬೇತಿ ಪಡೆದ ಹಾವು ರಕ್ಷಕರಿಗೆ ಮಾಹಿತಿ ನೀಡುವುದು ಸುರಕ್ಷಿತ.ಹಾವಿನ ಬಗ್ಗೆ ಭಯ ಬೇಡ, ಆದರೆ ಜಾಗ್ರತೆ ಇರಲಿ ಎಂದು ಉರಗತಜ್ಞ ಸುನೀಲ್ ಹೊನ್ನಾವರ ಮಾಹಿತಿ ನೀಡಿ ಜಾಗೃತಿ ಮೂಡಿಸಿದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share