Friday, July 24, 2026
Join WhatsApp Group
HomeAgricultureಕುಕ್ಕುಟ ಸಂಜೀವಿನಿ ಯೋಜನೆ

ಕುಕ್ಕುಟ ಸಂಜೀವಿನಿ ಯೋಜನೆ

ಗ್ರಾಮೀಣ ಕುಟುಂಬಗಳಿಗೆ ಆತ್ಮನಿರ್ಭರ ಬದುಕಿನ ದಾರಿ

ಕರ್ನಾಟಕ ಸರ್ಕಾರವು ಗ್ರಾಮೀಣ ಪ್ರದೇಶದ ಬಡ ಹಾಗೂ ಹಿಂದುಳಿದ ಕುಟುಂಬಗಳಿಗೆ ಹೆಚ್ಚುವರಿ ಆದಾಯದ ಮಾರ್ಗ ಕಲ್ಪಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಪ್ರಮುಖ ಯೋಜನೆಗಳಲ್ಲಿ ಕುಕ್ಕುಟ ಸಂಜೀವಿನಿ ಯೋಜನೆಯೂ ಒಂದು.

ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯಡಿ ಕಾರ್ಯನಿರ್ವಹಿಸುವ ಈ ಯೋಜನೆ, ಕೋಳಿ ಸಾಕಾಣಿಕೆಯನ್ನು ಉತ್ತೇಜಿಸಿ ಮಹಿಳಾ ಸಬಲೀಕರಣಕ್ಕೂ, ಪೋಷಣಾ ಭದ್ರತೆಯೊಂದಿಗೂ ನೆರವಾಗುವ ಸಮಗ್ರ ಕಾರ್ಯಕ್ರಮ.

ಈ ಯೋಜನೆಯ ಮುಖ್ಯ ಉದ್ದೇಶ ಗ್ರಾಮೀಣ ಬಡ ಕುಟುಂಬಗಳು, ವಿಶೇಷವಾಗಿ ಮಹಿಳಾ ಮುಖ್ಯಸ್ಥರಿರುವ ಕುಟುಂಬಗಳು, ಸ್ವಸಹಾಯ ಸಂಘಗಳ ಸದಸ್ಯರು, ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸಣ್ಣ ಮಟ್ಟದ ಕುಕ್ಕುಟ ಸಾಕಾಣಿಕೆ ಘಟಕಗಳನ್ನು ಒದಗಿಸಿ ಅವರ ಜೀವನಮಟ್ಟವನ್ನು ಸುಧಾರಿಸುವುದು.

ಕಡಿಮೆ ಹೂಡಿಕೆಯಲ್ಲಿ ಆರಂಭಿಸಬಹುದಾದ ಕೋಳಿ ಸಾಕಾಣಿಕೆ, ದಿನನಿತ್ಯದ ನಗದು ಹರಿವನ್ನು ಒದಗಿಸುವುದರಿಂದ ಇದು “ಆದಾಯ ಸೃಷ್ಟಿ + ಪೌಷ್ಟಿಕ ಆಹಾರ” ಎರಡನ್ನೂ ಒಟ್ಟಿಗೆ ನೀಡುವ ಯೋಜನೆಯಾಗಿ ಪರಿಗಣಿಸಲಾಗುತ್ತದೆ.

ಕುಕ್ಕುಟ ಸಂಜೀವಿನಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಸಾಮಾನ್ಯವಾಗಿ 10ರಿಂದ 20ರ ತನಕ ಉತ್ತಮ ಜಾತಿಯ ಕೋಳಿ ಮರಿಗಳನ್ನು ನೀಡಲಾಗುತ್ತದೆ. ಜೊತೆಗೆ ಅವುಗಳಿಗೆ ಪ್ರಾಥಮಿಕ ಆಹಾರ, ಲಸಿಕೆ, ಔಷಧೋಪಚಾರ ಮಾರ್ಗದರ್ಶನ ಹಾಗೂ ಸಾಕಾಣಿಕೆ ಕುರಿತು ತಾಂತ್ರಿಕ ತರಬೇತಿಯನ್ನು ನೀಡಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಕೋಳಿ ಶೆಡ್ ನಿರ್ಮಾಣಕ್ಕೆ ಸಹ ಅನುದಾನ ಅಥವಾ ಮಾರ್ಗದರ್ಶನ ಒದಗಿಸಲಾಗುತ್ತದೆ.

ಗ್ರಾಮೀಣ ಪ್ರದೇಶದ ಬಿಪಿಎಲ್ ಕುಟುಂಬಗ̧ಳು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು, ಪರಿಶಿಷ್ಟ ಜಾತಿ/ಪಂಗಡದವರು, ಸಣ್ಣ ರೈತರು, ನಿರುದ್ಯೋಗಿ ಗ್ರಾಮೀಣ ಯುವಕರಿಗೆ ಈ ಯೋಜನೆ ವರದಾನವೇ ಆಗಿದೆ.

ನರೇಗಾ ಯೋಜನೆಯಡಿ 500 ಕೋಳಿಗಳ ಸಾಮರ್ಥ್ಯದ ಶೆಡ್‌ಗೆ 4.5 ಲಕ್ಷ ರೂ, 1000 ಕೋಳಿಗಳ ಸಾಮರ್ಥ್ಯದ ಶೆಡ್‌ಗೆ  7.5 ಲಕ್ಷ ರೂ ನೆರವು ನೀಡುತ್ತದೆ. ಈ ಯೋಜನೆಯ ಪ್ರಮುಖ ವಿಶೇಷತೆ ಎಂದರೆ ಖಚಿತ ಖರೀದಿ ವ್ಯವಸ್ಥೆ. ಮೊಟ್ಟೆಗಳನ್ನು ಸರ್ಕಾರಿ ಶಾಲೆಗಳ ಪೌಷ್ಟಿಕ ಆಹಾರ ಯೋಜನೆಯಡಿ ಸರ್ಕಾರವೇ ಖರೀದಿಸಬಹುದು. ಮಾರುಕಟ್ಟೆ ಅನಿಶ್ಚಿತತೆ ಇಲ್ಲ, ಬೆಲೆ ಏರಿಳಿತದ ಭಯ ಕಡಿಮೆ, ಮಧ್ಯವರ್ತಿಗಳ ಅವಲಂಬನೆ ತಪ್ಪುತ್ತದೆ

ಈ ಯೋಜನೆಗೆ ಆನ್‌ಲೈನ್ ಅರ್ಜಿ ವ್ಯವಸ್ಥೆ ಇಲ್ಲ. ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಆಫ್‌ಲೈನ್ ಮೂಲಕ ನಡೆಯುತ್ತದೆ. ಪಶುವೈದ್ಯಾಧಿಕಾರಿಯನ್ನು ಭೇಟಿ ಮಾಡಿ ಅರ್ಜಿ ನಮೂನೆ ಪಡೆಯಬೇಕು. NREGA ಮೂಲಕ ಶೆಡ್ ನಿರ್ಮಾಣಕ್ಕೆ ಅರ್ಜಿ ಹಾಕಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಬೇಕು. ಅಧಿಕಾರಿಗಳು ಭೂಮಿಯನ್ನು ಪರಿಶೀಲಿಸುತ್ತಾರೆ. ಪರಿಶೀಲನೆ ನಂತರ ನಿಯಮಾನುಸಾರ ಹಣ ಮಂಜೂರು ಮಾಡಲಾಗುತ್ತದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share