Friday, July 24, 2026
Join WhatsApp Group
HomeYour Voiceಸಹೋದರನೆಂದರೆ ಸಾಹುಕಾರ!

ಸಹೋದರನೆಂದರೆ ಸಾಹುಕಾರ!

 ಸಹೋದರ ನಮ್ಮ ಜೀವನದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಿರುತ್ತಾನೆ. ಪ್ರತಿಯೊಂದು ಕುಟುಂಬದಲ್ಲಿ ಅಣ್ಣ ಮತ್ತು ತಮ್ಮ ಎಂಬ ಸಹೋದರ ಭಾವವನ್ನು ಹೊಂದಿರುವವರು ಪ್ರತಿ ಅಕ್ಕ ಮತ್ತು ತಂಗಿಯರಿಗೂ ಉತ್ತಮ ಸ್ನೇಹಿತರಾಗಿಯೂ,ಮಾರ್ಗದರ್ಶಕರಾಗಿಯೂ ಮತ್ತು ರಕ್ಷಕನಾಗಿಯೂ ನಡೆದುಕೊಳ್ಳುತ್ತಾರೆ.

ಸಹೋದರರೊಂದಿಗೆ ಇರುವ ಒಡನಾಡಿತನವು ಪ್ರೀತಿ, ತ್ಯಾಗ ಮತ್ತು ನಂಬಿಕೆಯ ಮೇಲೆ‌ ನಿಂತಿರುತ್ತದೆ. ಮಕ್ಕಳಾಗಿ ಬೆಳೆದಾಗ ಒಟ್ಟಿಗೆ ಆಟವಾಡುತ್ತಾರೆ, ಒಟ್ಟಿಗೆ ಹಲವಾರುವಿಷಯಗಳ ಬಗ್ಗೆ ಕಲಿಯುತ್ತಾರೆ.

ಜೀವನದ ಹಲವಾರು ಅನುಭವಗಳನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ. ಅಣ್ಣನೊಬ್ಬ ಇದ್ದರೆ ತಂಗಿಯರಿಗೆ ಮತ್ತು ತಮ್ಮನಿಗೆ ಯಾವಾಗಲೂ ದಾರಿ ತೋರಿಸುವ ದೀಪವಾಗಿರುತ್ತಾರೆ.

 ಸಹೋದರನೆಂದರೆ ಕೇವಲ ಕುಟುಂಬದ ಸದಸ್ಯ ಮಾತ್ರವಲ್ಲ. ಪ್ರತಿ ತಂಗಿಯ ಜೀವನದಲ್ಲಿ ಉತ್ತಮ ಸ್ನೇಹಿತನಾಗಿಯೂ, ಒಳ್ಳೆಯ ಸಹಪಾಠಿಯಾಗಿಯೂ ಸದಾ ಜೊತೆಯಲ್ಲಿ ಇರುತ್ತಾನೆ. ಜೀವನದಲ್ಲಿ ಎಂತಹ ಸಮಸ್ಯೆಗಳು ಬಂದರೂ ತಂಗಿಯ ಜೊತೆಗೆ ನಾನು ಇದ್ದೇನೆ ‌ಎಂದು ಧೈರ್ಯ‌ ನೀಡುತ್ತಾನೆ, ಯಾವ ಸಮಯದಲ್ಲೂ ಕೂಡ ನೆರವಾಗುತ್ತಾನೆ.

ತಂಗಿಯ ಸಂತೋಷವನ್ನು ಹಂಚಿಕೊಳ್ಳುವ ಮೊದಲ ವ್ಯಕ್ತಿ ಯಾಗಿರುತ್ತಾನೆ. ಸಹೋದರನು ಯಾವಾಗಲೂ ತಂಗಿಯ ಸುಖ-ದುಃಖದಲ್ಲಿ ಪಾಲ್ಗೊಳ್ಳುವ ಉತ್ತಮ ಗೆಳೆಯನಾಗಿಯೂ ಮತ್ತು 2ನೇ ತಂದೆಯಾಗಿಯೂ ಇರುತ್ತಾನೆ.

ಅಣ್ಣ ಮತ್ತು ತಂಗಿಯ ನಡುವಿನ ಸಂಬಂಧದಲ್ಲಿ ಕೆಲವೊಮ್ಮೆ ಸಣ್ಣ ಪುಟ್ಟ ಜಗಳಗಳು ನಡೆಯಬಹುದು. ಆದರೆ ಆ ಜಗಳಗಳುಹೆಚ್ಚು ಸಮಯ ಉಳಿಯುವುದೇ ಇಲ್ಲ. ಏಕೆಂದರೆ ಅವರ ಮಧ್ಯೆ ಉಂಟಾದ ಆ ಪ್ರೀತಿ-ವಾತ್ಸಲ್ಯದ ಭಾವ ಮತ್ತು ಅವರನ್ನು ಅರ್ಥಮಾಡಿಕೊಳ್ಳವ ಸ್ವಭಾವದಿಂದ ಮತ್ತೆ ಒಂದಾಗುತ್ತಾರೆ.

ಈ ರೀತಿಯ ಭಾವನೆಗಳಿಂದ ಭಾಂದವ್ಯ ಮತ್ತಷ್ಟು ಗಟ್ಟಿಯಾಗುತ್ತದೆ. ಅಣ್ಣನು ತಂಗಿಯ ಜೀವನ ಎಂಬ ಪಯಾಣದಲ್ಲಿ ಸದಾ ಜೊತೆಯಲ್ಲಿ ಪ್ರಯಾಣಿಸುವ ವ್ಯಕ್ತಿ. ತಂಗಿಯ ಯಶಸ್ಸಿನ ಜೊತೆಗೆ ಭಾಗಿಯಾಗಿ ಅವಳ ಸಂತೋಷವನ್ನು ತನ್ನ ಸಂತೋಷ ಎಂದು ಕೊಂಡಾಡುವವನೇ ನಿಜವಾದ ಸಹೋದರ.

ಯಾರೂ ನೀಡಲಾಗದ ಪ್ರೀತಿಯನ್ನು ತನ್ನ ತಂಗಿಗೆ ನೀಡುವವ ಸಹೋದರ. ತನ್ನ ತಂಗಿಯ ಬೇಡಿಕೆಯನ್ನು ಹೇಳದೆ-ಕೇಳದೆ ಬೇಗನೆ ಪೂರೈಸುತ್ತಾನೆ. ಜಗತ್ತಿನಲ್ಲಿ‌ ತನ್ನ ತಂಗಿಗಾಗಿ ಯಾವುದೋ ಒಂದು ಕಡೆಯಲ್ಲಿ ಪುಟ್ಟ ಪ್ರಪಂಚವನ್ನೇ ಸೃಷ್ಟಿಸಿಕೊಂಡಿರುತ್ತಾನೆ. ಒಬ್ಬಳು ತಂಗಿಗೆ ಅಣ್ಣನ ಆಸರೆ ಎನ್ನುವುದು ಯಾವಾಗಲೂ ಇದ್ದರೆ ಅವಳು ಏನು ಬೇಕಾದರೂ ಮಾಡಬಹುದು .ಅದ್ದರಿಂದ ತಂಗಿಗೇ ಅಣ್ಣನೇ ಸಾಹುಕಾರ…

– ಪೂಜಾ ಪ್ರಕಾಶ್ ಚಿಲುಮೆಹೊಂಡ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share