ಶಿರಸಿ: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಶಿರಸಿ ತಾಲೂಕಿನ ಚಿಪಗಿ ಹೊಸ್ಮನೆ ಕ್ರಾಸ್ನಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಶಿರಸಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶಿರಸಿ–ಯಲ್ಲಾಪುರ ರಸ್ತೆಯ ಚಿಪಗಿ ಹೊಸ್ಮನೆ ಕ್ರಾಸ್ನ ಸಾರ್ವಜನಿಕ ಸ್ಥಳದಲ್ಲಿ ಆ.10ರಂದು ಸಂಜೆ 7.15ರ ಸುಮಾರಿಗೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಶಿರಸಿ ಗ್ರಾಮೀಣ ಠಾಣೆ ಪಿಎಸ್ಐ ಅಶೋಕ ಆರ್. ರಾಠೋಡ ಹಾಗೂ ಸಿಬ್ಬಂದಿ ಪಂಚರೊಂದಿಗೆ ದಾಳಿ ನಡೆಸಿದ್ದಾರೆ.
ಈ ವೇಳೆ ಕುದರೆಮನೆ, ಬೊಪ್ಪನಳ್ಳಿ ನಿವಾಸಿ, ಚಿಕನ್ ವ್ಯಾಪಾರಿ ಮಂಜುನಾಥ ಕೃಷ್ಣ ಮೊಗೇರ (35) ಎಂಬಾತ ಸಿಕ್ಕಿಬಿದ್ದಿದ್ದಾನೆ. ಸ್ಥಳದಿಂದ 90 ಎಂ.ಎಲ್. ಅಳತೆಯ ಮದ್ಯವಿದ್ದ ಒಟ್ಟು ಆರು ಟೆಟ್ರಾ ಪ್ಯಾಕೆಟ್ಗಳು, ಮದ್ಯ ಸೇವನೆಗೆ ಬಳಸಿದ ಎರಡು ಪ್ಲಾಸ್ಟಿಕ್ ಗ್ಲಾಸ್ಗಳು ಹಾಗೂ ನೀರಿನ ಬಾಟಲಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಮಂಜುನಾಥ ಮೊಗೇರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.