Friday, July 24, 2026
Join WhatsApp Group
HomeCrimeಇಕೋ ವಾಹನ ಡಿಕ್ಕಿ; ಚಾಲಕ ಪರಾರಿ, ಚಿಕಿತ್ಸೆ ಫಲಿಸದೆ ರೈತ ಸಾವು

ಇಕೋ ವಾಹನ ಡಿಕ್ಕಿ; ಚಾಲಕ ಪರಾರಿ, ಚಿಕಿತ್ಸೆ ಫಲಿಸದೆ ರೈತ ಸಾವು

ಮುಂಡಗೋಡ: ದುಡುಕಿನ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಅಪಘಾತ ಎಸಗಿ ಪರಾರಿಯಾದ ಅಪರಿಚಿತ ಇಕೋ ವಾಹನ ಚಾಲಕನ ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರನ್ನು ತಾಲೂಕಿನ ಕಾಳಗನಕೊಪ್ಪ ಗ್ರಾಮದ ಸುಭಾಷ್ ಸಹದೇವಪ್ಪ ತಳಕೇರಿ (48) ಎಂದು ಗುರುತಿಸಲಾಗಿದೆ.

ಜುಲೈ 1ರಂದು ರಾತ್ರಿ ಸುಮಾರು 9.43ಕ್ಕೆ ಮುಂಡಗೋಡದಿಂದ ಕಾಳಗನಕೊಪ್ಪ ಕಡೆಗೆ ಬರುತ್ತಿದ್ದ ಇಕೋ ವಾಹನವು ನಿಯಂತ್ರಣ ತಪ್ಪಿ, ಅರಣ್ಯ ಇಲಾಖೆಯ ಟಿಂಬರ್ ಡಿಪೋ ಸಮೀಪ ಎದುರಿನಿಂದ ಬರುತ್ತಿದ್ದ  ಬೈಕ್‌ಗೆ ಡಿಕ್ಕಿ ಹೊಡೆದಿದೆ. 

ಅಪಘಾತದಲ್ಲಿ ಸುಭಾಷ್ ತಳಕೇರಿ ಅವರ ಬಲ ಕಾಲು ಹಾಗೂ ಬಲ ಕೈಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮೊದಲು ಮುಂಡಗೋಡ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅದೇ ರಾತ್ರಿ ಮೃತಪಟ್ಟಿದ್ದಾರೆ.

ಅಪಘಾತದ ಬಳಿಕ ಇಕೋ ವಾಹನ ಚಾಲಕ ಗಾಯಾಳುವಿಗೆ ನೆರವು ನೀಡದೇ, ಆಸ್ಪತ್ರೆಗೆ ದಾಖಲಿಸದೇ ಹಾಗೂ ಪೊಲೀಸರಿಗೆ ಮಾಹಿತಿ ನೀಡದೇ ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಪರಾರಿಯಾದ ವಾಹನ ಚಾಲಕನ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share