Wednesday, October 28, 2026
HomeCrimeಹಳಿಯಾಳ | ಖರೀದಿಸಿದ್ದು 25 ಲಕ್ಷ ರೂ ಮೆಕ್ಕೆಜೋಳ, ಕೊಟ್ಟಿದ್ದು 5 ಲಕ್ಷ ರೂ!

ಹಳಿಯಾಳ | ಖರೀದಿಸಿದ್ದು 25 ಲಕ್ಷ ರೂ ಮೆಕ್ಕೆಜೋಳ, ಕೊಟ್ಟಿದ್ದು 5 ಲಕ್ಷ ರೂ!

ಹಳಿಯಾಳ: ಕಂಪನಿಯಿಂದ 25.08 ಲಕ್ಷ ರೂ ಮೌಲ್ಯದ ಮೆಕ್ಕೆಜೋಳ ಖರೀದಿಸಿ, ಪೂರ್ಣ ಹಣ ಪಾವತಿಸದೆ ವಂಚಿಸಿದ ಆರೋಪದಡಿ ಮೂವರ ವಿರುದ್ಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳಿಯಾಳದ ಕೃತಜ್ಞ ಅಗ್ರೋಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪರವಾಗಿ ರಾಘವೇಂದ್ರ ರಾಮಾ ನಾಕಾಡಿ (32) ಅವರು ದೂರು ನೀಡಿದ್ದಾರೆ. ದಕ್ಷಿಣ ತಮಿಳುನಾಡಿನ ಅಬುಬಕರ ಅಬ್ದುಲ್ ಸಲೀಂ, ಸೈಯದ್ ಮೂಸಾ ಸೈಯದ್ ರಿಯಾಜ್ ಹಾಗೂ ಅಶ್ರಫ್ ಎ.ಡಬ್ಲ್ಯೂ. ಅಲಿಯಾಸ್ ಮಹಮ್ಮದ್ ಎಂಬುವವರು ಆರೋಪಿತರು.

ದೂರಿನ ಪ್ರಕಾರ, ಆರೋಪಿತರು ಮೆಕ್ಕೆಜೋಳದ ಖರೀದಿ ಮತ್ತು ಮಾರಾಟದ ವ್ಯವಹಾರ ನಡೆಸುತ್ತಿರುವುದಾಗಿ ಕಂಪನಿಯನ್ನು ಸಂಪರ್ಕಿಸಿದ್ದರು. ದೊಡ್ಡ ಪ್ರಮಾಣದಲ್ಲಿ ಮೆಕ್ಕೆಜೋಳ ಖರೀದಿಸಿ, ನಿಗದಿತ ಅವಧಿಯಲ್ಲಿ ಸಂಪೂರ್ಣ ಹಣ ಪಾವತಿಸುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ.

ಅದರಂತೆ 2025ರ ಅ.14, 15 ಮತ್ತು 17ರಂದು ಮೂರು ಟ್ರಕ್‌ಗಳ ಮೂಲಕ ಒಟ್ಟು 104 ಟನ್ 525 ಕೆ.ಜಿ. ಮೆಕ್ಕೆಜೋಳವನ್ನು ಪಡೆದುಕೊಂಡಿದ್ದರು. ಇದರ ಒಟ್ಟು ಮೌಲ್ಯ 25,08,600 ರೂ ಆಗಿತ್ತು. ಆದರೆ, ನಿಗದಿತ ಅವಧಿಯಲ್ಲಿ ಹಣ ಪಾವತಿಸದೆ ವಿವಿಧ ಕಾರಣಗಳನ್ನು ಹೇಳುತ್ತಾ ಮುಂದೂಡುತ್ತ ಬಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

2025ರ ಅ.19ರಂದು ಆರೋಪಿತರ ಬ್ಯಾಂಕ್ ಖಾತೆಯಿಂದ ಕಂಪನಿಯ ಕೆನರಾ ಬ್ಯಾಂಕ್ ಚಾಲ್ತಿ ಖಾತೆಗೆ 5 ಲಕ್ಷ ರೂ ವರ್ಗಾವಣೆಯಾಗಿತ್ತು. ಉಳಿದ ಹಣ ಪಾವತಿಸುವಂತೆ ಹಲವು ಬಾರಿ ಕೇಳಿಕೊಂಡರೂ ಪಾವತಿಸದೆ ವಂಚಿಸಿದ್ದಾರೆ ಎಂಬುದು ದೂರುದಾರರ ಆರೋಪ.

ಬಾಕಿ ಹಣ ನೀಡುವುದಾಗಿ ನಂಬಿಸುತ್ತ ಬಂದಿದ್ದರಿಂದ ದೂರು ನೀಡಲು ವಿಳಂಬವಾಯಿತು ಎಂದು ರಾಘವೇಂದ್ರ ನಾಕಾಡಿ ತಿಳಿಸಿದ್ದಾರೆ. ಪ್ರಕರಣದ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯಬೇಕಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad

Most Popular

Recent Comments

error: Content is protected !!
Share