ಕಾರವಾರ: ಬಡ ಕುಟುಂಬಗಳಿಗೆ ವಿತರಿಸುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸುವುದು, ಮಾರಾಟ ಮಾಡುವುದು ಅಥವಾ ಸಾಗಾಟ ಮಾಡುವುದನ್ನು ಕಂಡುಬಂದಲ್ಲಿ ಸಾರ್ವಜನಿಕರು ಆಹಾರ ಇಲಾಖೆಗೆ ಮಾಹಿತಿ ನೀಡುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮನವಿ ಮಾಡಿದೆ.
ಜಿಲ್ಲೆಯಲ್ಲಿ ಒಟ್ಟು 3,04,432 ಪಡಿತರ ಚೀಟಿಗಳಿದ್ದು, 11,06,554 ಸದಸ್ಯರು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಹಾಗೂ ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ತಲಾ 10 ಕೆಜಿ ಅಕ್ಕಿ ಪಡೆಯುತ್ತಿದ್ದಾರೆ. ಇದರಲ್ಲಿ 15,810 ಅಂತ್ಯೋದಯ ಪಡಿತರ ಚೀಟಿಗಳ 65,047 ಸದಸ್ಯರು ಹಾಗೂ 2,88,622 ಆದ್ಯತಾ ಕುಟುಂಬಗಳ 10,41,507 ಸದಸ್ಯರು ಸೇರಿದ್ದಾರೆ.
ಸರ್ಕಾರದಿಂದ ಉಚಿತವಾಗಿ ಅಥವಾ ಸಬ್ಸಿಡಿ ದರದಲ್ಲಿ ವಿತರಿಸುವ ಪಡಿತರ ಅಕ್ಕಿಯನ್ನು ಚೀಟಿದಾರರು ತಮ್ಮ ಕುಟುಂಬದ ಬಳಕೆಗೆ ಮಾತ್ರ ಉಪಯೋಗಿಸಬೇಕು. ಅದನ್ನು ಮಾರಾಟ ಮಾಡುವುದು ಕಾನೂನುಬಾಹಿರವಾಗಿದ್ದು, ಇಂತಹ ಪ್ರಕರಣಗಳು ಪತ್ತೆಯಾದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
ಜಿಲ್ಲೆಯಲ್ಲಿ 2026ರ ಏಪ್ರಿಲ್ನಿಂದ ಈವರೆಗೆ ಅಗತ್ಯ ವಸ್ತುಗಳ ಕಾಯ್ದೆ-1955ರ ಅಡಿಯಲ್ಲಿ ಎಂಟು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಒಟ್ಟು 346.4 ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಡಿತರ ಅಕ್ಕಿಯ ಅಕ್ರಮ ಸಂಗ್ರಹಣೆ, ಮಾರಾಟ ಅಥವಾ ಸಾಗಾಟ ಕಂಡುಬಂದಲ್ಲಿ ಸಂಬಂಧಿಸಿದ ತಾಲೂಕು ಆಹಾರ ನಿರೀಕ್ಷಕರಿಗೆ ಅಥವಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯವಾಣಿ 1967ಕ್ಕೆ ಮಾಹಿತಿ ನೀಡಬಹುದು.
ತಾಲೂಕುವಾರು ಆಹಾರ ನಿರೀಕ್ಷಕರ ಸಂಪರ್ಕ ವಿವರಗಳು:
- ಕಾರವಾರ – ರಾಜೇಶ ವಾರಿಕ: 9844936617
- ಅಂಕೋಲಾ – ಮಂಜುನಾಥರೆಡ್ಡಿ ಹುಚ್ಚಣವರ: 9449834702
- ಕುಮಟಾ – ನವೀನಕುಮಾರ ನಾಯ್ಕ: 9980561035
- ಹೊನ್ನಾವರ – ದೀಕ್ಷಾ ಎಂ.ಎಂ.: 8147528515
- ಭಟ್ಕಳ – ಶಶಿಧರ ಹೊನ್ನಳ್ಳಿ: 9591245522
- ಶಿರಸಿ – ಕವಿತಾ ಪಾಟಣಕರ: 8892824769
- ಸಿದ್ದಾಪುರ – ಶೇಖರ ಕಲೇಕರ: 8197358804
- ಯಲ್ಲಾಪುರ – ರಾಘವೇಂದ್ರ ಗೌಡ: 9449203105
- ಮುಂಡಗೋಡ – ಸಂಜಯ ಲಮಾಣಿ: 9632516686
- ಹಳಿಯಾಳ – ಸಂತೋಷ ತೊಂಡ್ಲೆ: 8277245007
- ದಾಂಡೇಲಿ – ಗೋಪಿ ಚೌವ್ಹಾಣ: 7022892289
- ಜೋಯಿಡಾ – ದೇವೇಂದ್ರ ಭಜಂತ್ರಿ: 9483806499


