Monday, September 7, 2026
Join WhatsApp Group
HomeCrimeಗಣೇಶನ ಎದುರು ಕೌಶಲ್ಯದಾಟ; ನಗದು ಸಹಿತ ಐವರು ಪೊಲೀಸರ ಬಲೆಗೆ

ಗಣೇಶನ ಎದುರು ಕೌಶಲ್ಯದಾಟ; ನಗದು ಸಹಿತ ಐವರು ಪೊಲೀಸರ ಬಲೆಗೆ

ಮುಂಡಗೋಡ: ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕಿಟ್ಟು ಇಸ್ಪೀಟ್ ಜುಗಾರಾಟ ನಡೆಸುತ್ತಿದ್ದ ಐವರನ್ನು ಮುಂಡಗೋಡ ಪೊಲೀಸರು ವಶಕ್ಕೆ ಪಡೆದು, 6,700 ರೂ ನಗದು ಹಾಗೂ 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.

ಮುಂಡಗೋಡ ಪಟ್ಟಣದ ಕಾಳಗನಕೊಪ್ಪ ಗಣಪತಿ ದೇವಸ್ಥಾನದ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಆ.27ರಂದು ಬೆಳಗಿನ ಜಾವ 3.10ರ ಸುಮಾರಿಗೆ ಈ ಜುಗಾರಾಟ ನಡೆಯುತ್ತಿತ್ತು. ತಮ್ಮ ಸ್ವಂತ ಲಾಭಕ್ಕಾಗಿ ಐವರು ಇಸ್ಪೀಟ್ ಎಲೆಗಳನ್ನು ಬಳಸಿ ಅದೃಷ್ಟದ ಆಟದ ಮೇಲೆ ಹಣವನ್ನು ಪಣವಾಗಿ ಕಟ್ಟಿಕೊಂಡು ‘ಅಂದರ್-ಬಾಹರ್’ ಜುಗಾರಾಟದಲ್ಲಿ ತೊಡಗಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.

ಈ ಸಂಬಂಧ ಮುಂಡಗೋಡ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಮೇಶ ಹನಾಪುರ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.

ಗಾಂಧಿನಗರದ ಪರಶುರಾಮ ಕಲ್ಲಪ್ಪ ಛಲವಾದಿ, ಇಂದಿರಾನಗರದ ಅಕ್ಬರಷಾ ಅಕ್ತರಷಾ ಮಿರಾಶಿ, ಕಂಬಾರಗಟ್ಟಿ ಪ್ಲಾಟ್ನ ಗೌಸಮೊದ್ದೀನ ಸರವರಸಾಬ್ ಉಸ್ತಾದಿ, ಗಣೇಶ ಫಕ್ಕೀರಪ್ಪ ಲಮಾಣಿ, ಹೊಸಓಣಿಯ ನಾಗರಾಜ ಹನುಮಂತಪ್ಪ ವಾಲ್ಮೀಕಿ ಪ್ರಕರಣದ ಆರೋಪಿಗಳು.

ನ್ಯಾಯಾಲಯದ ಅನುಮತಿ ಪಡೆದು ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share