Friday, July 24, 2026
Join WhatsApp Group
HomeHealthಮನೆಯಲ್ಲೇ ಇದೆ ಮಧುಮೇಹಕ್ಕೆ ಮದ್ದು!

ಮನೆಯಲ್ಲೇ ಇದೆ ಮಧುಮೇಹಕ್ಕೆ ಮದ್ದು!

ಇತ್ತೀಚಿನ ದಿನಗಳಲ್ಲಿ Diabetes ಸಮಸ್ಯೆ ಸರ್ವೇಸಾಮಾನ್ಯ ಎಂಬಂತಾಗಿದ್ದು, ಯುವಕರಲ್ಲಿಯೂ ಹೆಚ್ಚಾಗಿ ಕಾಣಿಸುತ್ತಿದೆ. ಅಸ್ತವ್ಯಸ್ತ ಜೀವನಶೈಲಿ, ಅತಿಯಾದ ಜಂಕ್ ಫುಡ್ ಸೇವನೆ ಹಾಗೂ ವ್ಯಾಯಾಮದ ಕೊರತೆಯಿಂದ ಶುಗರ್ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ.

ಆದರೆ ಕೆಲವು ಸರಳ ಆಹಾರ ಪದ್ಧತಿಗಳನ್ನು ಅಳವಡಿಸಿಕೊಂಡರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಬಹುದು ಎಂಬುದು ಆರೋಗ್ಯ ತಜ್ಞರ ಸಲಹೆ.

ವಿಶೇಷವಾಗಿ ನೈಸರ್ಗಿಕ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ಇನ್ಸುಲಿನ್ ಕಾರ್ಯಕ್ಷಮತೆ ಉತ್ತಮವಾಗಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ರಸ ಅಥವಾ ಕಹಿಬೇವು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗಲು ಸಹಕಾರಿ.

ಮೆಂತೆ ಕಾಳುಗಳನ್ನು ಮೊಳಕೆ ಬರಿಸಿ ಸೇವಿಸುವುದರಿಂದ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ದೊರೆಯುತ್ತವೆ. ಇದು ಶುಗರ್ ನಿಯಂತ್ರಣಕ್ಕೆ ಸಹಕಾರಿ. ಹಲವರು ಮೆಂತೆ ನೀರು ಸೇವಿಸುತ್ತಾರೆ, ಆದರೆ ಮೊಳಕೆ ಮಾಡಿದ ಮೆಂತೆ ಹೆಚ್ಚು ಪರಿಣಾಮಕಾರಿ ಎಂದು ತಜ್ಞರು ಸೂಚಿಸುತ್ತಾರೆ.

ಆಹಾರದಲ್ಲಿ ನಿಂಬೆ ರಸ ಬಳಕೆ ಕೂಡ ಮುಖ್ಯವಾಗಿದೆ. ಉಪ್ಪಿನ ಪ್ರಮಾಣ ಕಡಿಮೆ ಮಾಡಿ ಅದರ ಬದಲಿಗೆ ನಿಂಬೆ ರಸವನ್ನು ಬಳಸುವುದರಿಂದ ದೇಹಕ್ಕೆ ವಿಟಮಿನ್ ಸಿ ದೊರೆಯುವುದರ ಜೊತೆಗೆ ಆರೋಗ್ಯಕ್ಕೂ ಲಾಭವಾಗಬಹುದು.

ಅಕ್ಕಿ ಸೇವನೆ ಕಡಿಮೆ ಮಾಡುವುದು ಕೂಡ ಮಧುಮೇಹ ನಿಯಂತ್ರಣಕ್ಕೆ ಸಹಕಾರಿ ಎಂಬ ಅಭಿಪ್ರಾಯವಿದೆ. ಬಿಳಿ ಅಕ್ಕಿ ಮಾತ್ರವಲ್ಲದೆ ಇತರ ವಿಧದ ಅಕ್ಕಿಯ ಬಳಕೆಯನ್ನೂ ಮಿತಗೊಳಿಸಿ, ಬದಲಿಗೆ ಸೋಯಾಬೀನ್, ಅಲಸಂದೆ ಹಾಗೂ ಬೇಳೆ ಪದಾರ್ಥಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವದು ಉತ್ತಮ.

ಜೀರಿಗೆ ಪುಡಿ ಕೂಡ ಶುಗರ್ ನಿಯಂತ್ರಣದಲ್ಲಿ ಸಹಾಯಕವಾಗಿದೆ. ಇದನ್ನು ಬೆಚ್ಚಗಿನ ನೀರಿನೊಂದಿಗೆ ನಿಗದಿತ ಪ್ರಮಾಣದಲ್ಲಿ ಸೇವಿಸಬಹುದು.

ನೇರಳೆ ಹಣ್ಣು ಮತ್ತು ಸೀಬೆಹಣ್ಣುಗಳಂತಹ ಋತುಮಾನದ ಹಣ್ಣುಗಳು ಕೂಡ ಮಧುಮೇಹಿಗಳಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ನಿಯಮಿತ ಆಹಾರ ನಿಯಂತ್ರಣ ಹಾಗೂ ವ್ಯಾಯಾಮದ ಜೊತೆಗೆ ಈ ರೀತಿಯ ನೈಸರ್ಗಿಕ ಪದ್ಧತಿಗಳನ್ನು ಅನುಸರಿಸಿದರೆ ಆರೋಗ್ಯದಲ್ಲಿ ಉತ್ತಮ ಬದಲಾವಣೆ ಕಾಣಬಹುದು.

ಆದರೆ ಯಾವುದೇ ಆರೋಗ್ಯ ಸಮಸ್ಯೆಗೆ ಸ್ವಯಂ ಚಿಕಿತ್ಸೆ ಮಾಡದೇ, ವೈದ್ಯರ ಸಲಹೆಯೊಂದಿಗೆ ಮಾತ್ರ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡುವುದು ಅತ್ಯಂತ ಮುಖ್ಯ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share