Friday, July 24, 2026
Join WhatsApp Group
HomeCrimeಶಿರಸಿ ವೈದ್ಯ ರಮೇಶ್ ಕಲಗುಟಕರ್ ಕೊ*ಲೆ ಪ್ರಕರಣ: ಪರಿಚಿತನಿಂದಲೇ ಕೃತ್ಯ ಶಂಕೆ?

ಶಿರಸಿ ವೈದ್ಯ ರಮೇಶ್ ಕಲಗುಟಕರ್ ಕೊ*ಲೆ ಪ್ರಕರಣ: ಪರಿಚಿತನಿಂದಲೇ ಕೃತ್ಯ ಶಂಕೆ?

ಶಿರಸಿ: ಶಿರಸಿಯಲ್ಲಿ ನಡೆದ ಆಯುರ್ವೇದ ವೈದ್ಯ ರಮೇಶ್ ಕಲಗುಟಕರ್ ಅವರ ಹ*ತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಮಹತ್ವದ ಪ್ರಗತಿ ಸಾಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಾಥಮಿಕ ತನಿಖೆ ಪ್ರಕಾರ, ಇತ್ತೀಚೆಗೆ ಪರಿಚಯವಾದ ವ್ಯಕ್ತಿಯೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.ಹುಬ್ಬಳ್ಳಿ ರಸ್ತೆಯಲ್ಲಿರುವ ತಮ್ಮ ಕ್ಲಿನಿಕ್‌ನಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದ ವೈದ್ಯರನ್ನು ಇದೇ ವ್ಯಕ್ತಿ ಹ*ತ್ಯೆಗೈದಿರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ವೈದ್ಯ ರಮೇಶ್ ಕಲಗುಟಕರ್ ಅವರ ಪತ್ನಿ ನಿಧನವಾದ ಬಳಿಕ, ಅವರು ಕುಟುಂಬದವರ ಒಪ್ಪಿಗೆಯೊಂದಿಗೆ ಮರುವಿವಾಹಕ್ಕೆ ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದೆ. ಸೋಮವಾರ ಮಂಜಗುಣಿಯಲ್ಲಿ ಅವರ ಮರುವಿವಾಹ ವಿವಾಹ ನಡೆಯಬೇಕಿತ್ತು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ, ಮನೆಯ ಲಾಕರ್‌ನಲ್ಲಿ ಇಟ್ಟಿದ್ದ ಬಂಗಾರವನ್ನು ಅವರು ಮನೆಗೆ ತಂದಿಟ್ಟಿದ್ದು, ಸ್ವತಃ ಆಭರಣಗಳನ್ನು ಧರಿಸುವ ಅಭ್ಯಾಸ ಹೊಂದಿದ್ದರಿಂದ, ಇದೇ ಬಂಗಾರವೇ ಹತ್ಯೆಗೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ವೈದ್ಯರ ಇಬ್ಬರು ಮಕ್ಕಳು ಇದ್ದು, ಒಬ್ಬರು Guwahatiನಲ್ಲಿ ಎಂ.ಬಿ.ಬಿ.ಎಸ್ ಅಭ್ಯಾಸ ಮಾಡುತ್ತಿದ್ದಾರೆ. ಮತ್ತೊಬ್ಬರು Amazon ಕಂಪನಿಯಲ್ಲಿ ಬೆಂಗಳೂರಿನಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದ ಕಾರಣ, ಏಕಾಂತದಿಂದ ಹೊರಬರಲು ವೈದ್ಯರು ಮರುವಿವಾಹ ನಿರ್ಧಾರ ಕೈಗೊಂಡಿದ್ದರು ಎಂದು ಹೇಳಲಾಗಿದೆ.ಪ್ರಕರಣದ ತನಿಖೆಯನ್ನು ಶಿರಸಿ ಪೊಲೀಸರು ವೇಗವಾಗಿ ನಡೆಸುತ್ತಿದ್ದು, ಆರೋಪಿಯನ್ನು ಪತ್ತೆಹಚ್ಚುವಲ್ಲಿ ಮಹತ್ವದ ಸುಳಿವುಗಳನ್ನು ಕಲೆಹಾಕಿದ್ದಾರೆಂಬ ಮಾಹಿತಿ ಲಭ್ಯವಾಗಿದ್ದು, ಪೊಲೀಸ್ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

(ವರದಿಯು ಲಭ್ಯ ಬಲ್ಲ ಮೂಲಗಳ ಮಾಹಿತಿ ಆಧರಿಸಿದ್ದು, ಪೊಲೀಸ್ ಇಲಾಖೆಯ ಅಧಿಕೃತ ಮಾಹಿತಿ ತಿಳಿದುಬರಬೇಕಿದೆ)

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share