Friday, July 24, 2026
Join WhatsApp Group
HomeCrimeಯು-ಟರ್ನ್ ವಿಚಾರಕ್ಕೆ ನಡುರಸ್ತೆಯಲ್ಲಿ ಜಗಳ; ಇಬ್ಬರ ವಿರುದ್ಧ ಪ್ರಕರಣ

ಯು-ಟರ್ನ್ ವಿಚಾರಕ್ಕೆ ನಡುರಸ್ತೆಯಲ್ಲಿ ಜಗಳ; ಇಬ್ಬರ ವಿರುದ್ಧ ಪ್ರಕರಣ

ಶಿರಸಿ: ಬೈಕ್‌ಗೆ ಇಂಡಿಕೇಟರ್ ಹಾಕದೆ ಯು-ಟರ್ನ್ ಮಾಡಿದ ವಿಚಾರಕ್ಕೆ ಇಬ್ಬರು ಸಾರ್ವಜನಿಕ ರಸ್ತೆಯಲ್ಲೇ ಕೈ-ಕೈ ಮಿಲಾಯಿಸಿಕೊಂಡು ಜಗಳವಾಡಿದ ಘಟನೆ ಶಿರಸಿಯಲ್ಲಿ ನಡೆದಿದ್ದು, ಈ ಸಂಬಂಧ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜುಲೈ 4ರಂದು ರಾತ್ರಿ 8.30ರ ಸುಮಾರಿಗೆ ಶಿರಸಿ ನಗರದ ಮುಬಾರಕ್ ಮೆಡಿಕಲ್ ಶಾಪ್ ಎದುರು ರಾಘವೇಂದ್ರ ಸಂಗಪ್ಪ ಹುಂಡೆಕರ್ ಹಾಗೂ ಮಹಮ್ಮದ ಆಸೀಫ್ ನಡುವೆ ಬೈಕ್ ಯು-ಟರ್ನ್ ಮಾಡುವ ವೇಳೆ ಇಂಡಿಕೇಟರ್ ಬಳಸದೇ ಇದ್ದ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದೆ.

ವಿವಾದ ತಾರಕಕ್ಕೇರಿ ಇಬ್ಬರೂ ಸಾರ್ವಜನಿಕ ಸ್ಥಳದಲ್ಲೇ ಪರಸ್ಪರ ನಿಂದಿಸಿಕೊಂಡು ಕೈ-ಕೈ ಮಿಲಾಯಿಸಿ ಜಗಳವಾಡಿದ್ದು, ಪೊಲೀಸ್ ಉಪನಿರೀಕ್ಷಕ (ತನಿಖೆ) ನಾರಾಯಣ ಆರ್. ರಾಠೋಡ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share