ಯಲ್ಲಾಪುರ: ಯಲ್ಲಾಪುರ ತಾಲೂಕಿನ ಬಾರೆ ಕತ್ರಿಯಿಂದ ಮಲವಳ್ಳಿಗೆ ಹೋಗುವ ಮಾರ್ಗದ ಜೋಗಾಳಕೇರಿ ಶಾಲೆ ಸಮೀಪ ವಿದ್ಯಾರ್ಥಿಗಳನ್ನು ಅಪರಿಚಿತರು ಬಲವಂತವಾಗಿ ವಾಹನಕ್ಕೆ ಕೂರಿಸಲು ಯತ್ನಿಸಿದ್ದಾರೆ ಎಂಬ ವದಂತಿ ಹರಿದಾಡುತ್ತಿದ್ದು, ಪಾಲಕರಲ್ಲಿ ಆತಂಕ ಮೂಡಿಸಿದೆ.
ಜುಲೈ 16ರಂದು ಸಂಜೆ ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಬಳಿ ಕಾರಿನಲ್ಲಿ ಬಂದ ಅಪರಿಚಿತರು ಮಾತನಾಡಿಸಿ ವಾಹನಕ್ಕೆ ಕೂರಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಸಂಜೆಸೂರ್ಯ ಮೀಡಿಯಾ YouTube ನಲ್ಲಿ ವಿಡಿಯೋ ನೋಡಿ 👇https://youtube.com/shorts/oYFfeMlcSm0?si=cCTPgrwuwULj79Ul
ಇದರಿಂದ ಹೆದರಿದ ವಿದ್ಯಾರ್ಥಿಗಳು ಸಮೀಪದ ಮನೆಯೊಂದರಲ್ಲಿ ಆಶ್ರಯ ಪಡೆದು ಬಳಿಕ ಸುರಕ್ಷಿತವಾಗಿ ಮನೆ ತಲುಪಿದ್ದಾರೆ ಎಂದು ಹೇಳಲಾಗಿದೆ.
ಆದರೆ, ಈ ಘಟನೆಯ ಕುರಿತು ಪೊಲೀಸರು ಅಥವಾ ಶಿಕ್ಷಣ ಇಲಾಖೆ ಅಧಿಕೃತವಾಗಿ ಯಾವುದೇ ಮಾಹಿತಿ ಅಥವಾ ದೃಢೀಕರಣ ನೀಡಿಲ್ಲ.
ಈ ಹಿನ್ನೆಲೆಯಲ್ಲಿ ಪಾಲಕರು ಮಕ್ಕಳಿಗೆ ಅಪರಿಚಿತರೊಂದಿಗೆ ಮಾತನಾಡದಂತೆ, ಅವರ ವಾಹನಗಳನ್ನು ಹತ್ತದಂತೆ ಹಾಗೂ ಯಾವುದೇ ಅನುಮಾನಾಸ್ಪದ ಘಟನೆ ಕಂಡುಬಂದರೆ ಕೂಡಲೇ ಶಿಕ್ಷಕರು, ಪಾಲಕರು ಅಥವಾ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸುವುದು ಅಗತ್ಯವಾಗಿದೆ.