Friday, July 24, 2026
Join WhatsApp Group
HomeLocal News2 ಕೋಟಿ ಮೌಲ್ಯದ ಭೂಮಿಯನ್ನು ದೇವಿಗೆ ಅರ್ಪಿಸಿದ ಉದ್ಯಮಿ

2 ಕೋಟಿ ಮೌಲ್ಯದ ಭೂಮಿಯನ್ನು ದೇವಿಗೆ ಅರ್ಪಿಸಿದ ಉದ್ಯಮಿ

ಕುಮಟಾ: ಭಕ್ತಿ ಮತ್ತು ದಾನಶೀಲತೆಯ ಅಪರೂಪದ ಉದಾಹರಣೆಯಾಗಿ ಉದ್ಯಮಿ ವಾಸುದೇವ ಬೈಂದೂರು ಅವರು ಸುಮಾರು 2 ಕೋಟಿ ರೂ. ಮೌಲ್ಯದ ಭೂಮಿಯನ್ನು ಕುಮಟಾದ ಬಾಡದ ಶ್ರೀ ಕಾಂಚಿಕಾ ಪರಮೇಶ್ವರಿ ದೇವಸ್ಥಾನಕ್ಕೆ ದಾನವಾಗಿ ನೀಡಿದ್ದಾರೆ.

ಬೈಂದೂರಿನ ಯಡ್ತಾರೆ ನಿವಾಸಿಯಾಗಿರುವ ವಾಸುದೇವ ಬೈಂದೂರು ಅವರು ಹೊಲನಗದ್ದೆ ಸಮೀಪ 24.8 ಗುಂಟೆ ಜಾಗದ ಮಾಲೀಕರಾಗಿದ್ದರು. ಈ ಭೂಮಿಯನ್ನು ದೇವಿ ಸನ್ನಿಧಿಗೆ ಅರ್ಪಿಸುವ ಇಚ್ಛೆಯನ್ನು ಅವರು ಈ ಹಿಂದೆ ದೇವಸ್ಥಾನದ ಅಧ್ಯಕ್ಷ ಎಸ್.ಎಸ್. ಹೆಗಡೆ ಅವರ ಬಳಿ ವ್ಯಕ್ತಪಡಿಸಿದ್ದರು. ಸುಮಾರು 2 ಕೋಟಿ ರೂ. ಮೌಲ್ಯದ ಈ ಭೂಮಿಯನ್ನು ಸಂಪೂರ್ಣವಾಗಿ ದಾನವಾಗಿ ನೀಡುವುದಾಗಿ ಘೋಷಿಸಿದ್ದರು.

ಅದರಂತೆ ಮಂಗಳವಾರ ಉಪನೋಂದಣಾಧಿಕಾರಿ ಕಚೇರಿ ಮೂಲಕ ಅಗತ್ಯ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ತಮ್ಮ ಹೆಸರಿನಲ್ಲಿದ್ದ ಭೂಮಿಯನ್ನು ದೇವಸ್ಥಾನಕ್ಕೆ ಹಸ್ತಾಂತರಿಸಿದರು. ದೇವಸ್ಥಾನದ ಪಶ್ಚಿಮ ದಿಕ್ಕಿನಲ್ಲಿರುವ ಈ ಜಾಗವನ್ನು ದೇವಸ್ಥಾನದ ಆಡಳಿತ ಮಂಡಳಿ ಅಧಿಕೃತವಾಗಿ ಸ್ವೀಕರಿಸಿತು.

ಈ ಸಂದರ್ಭದಲ್ಲಿ ವಾಸುದೇವ ಬೈಂದೂರು ಅವರು ನೋಂದಾಯಿತ ದಾನಪತ್ರವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಹಸ್ತಾಂತರಿಸಿದರು. ದಾನಪತ್ರ ಸ್ವೀಕರಿಸಿದ ಆಡಳಿತ ಮಂಡಳಿಯವರು ಅವರ ಉದಾರ ಮನೋಭಾವವನ್ನು ಶ್ಲಾಘಿಸಿ, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಮಸ್ತ ಭಕ್ತರ ಪರವಾಗಿ ಕೃತಜ್ಞತೆ ಸಲ್ಲಿಸಿದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share