Friday, July 24, 2026
Join WhatsApp Group
HomeLocal Newsರಾಜ್ಯಮಟ್ಟದ ಕಾರ್ಯಾಗಾರ ಮೇ 27ಕ್ಕೆ

ರಾಜ್ಯಮಟ್ಟದ ಕಾರ್ಯಾಗಾರ ಮೇ 27ಕ್ಕೆ

ಯಲ್ಲಾಪುರ: ಕರ್ನಾಟಕ ಜೀವ ವೈವಿಧ್ಯ ಮಂಡಳಿ ಬೆಂಗಳೂರು, ಯಲ್ಲಾಪುರ ತಾಲೂಕು ಪಂಚಾಯತ್‌ ಜೀವವೈವಿಧ್ಯ ಸಮಿತಿ ಹಾಗೂ ವೃಕ್ಷ ಲಕ್ಷ ಆಂದೋಲನ ಕರ್ನಾಟಕ ಇವರ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ ಅಂಗವಾಗಿ ʻಪಶ್ಚಿಮ ಘಟ್ಟದ ಜೀವವೈವಿಧ್ಯ, ಪರಿಸರ ಮತ್ತು ಅರಣ್ಯ ಅಧ್ಯಯನಗಳುʼ ಕುರಿತ ರಾಜ್ಯಮಟ್ಟದ ಒಂದು ದಿನದ ಕಾರ್ಯಾಗಾರವನ್ನು ಮೇ 27ರಂದು ಬೆಳಿಗ್ಗೆ 10.30ಕ್ಕೆ ತಾಲೂಕು ಪಂಚಾಯತ್‌ ಸಭಾಭವನದಲ್ಲಿ ಆಯೋಜಿಸಲಾಗಿದೆ.

ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ Vadnal Jagadish ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ Shivaram Hebbar ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಉಸ್ತುವಾರಿ ಸಚಿವ Mankal Vaidya, ಸಂಸದ Vishweshwar Hegde Kageri, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರು, ಶಾಂತಾರಾಮ ಸಿದ್ದಿ, ಗಣಪತಿ ಉಳ್ವೇಕರ್, ಜೀವವೈವಿಧ್ಯ ಮಂಡಳಿ ಸದಸ್ಯ ಕಾರ್ಯದರ್ಶಿ ಜಗತ್‌ ರಾಮ್‌, ಕೆನರಾ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್‌, ಜಿಲ್ಲಾ ಪಂಚಾಯತ್‌ ಸಿಇಒ ದಿಲೀಷ್‌ ಶಶಿ, ಜೀವವೈವಿಧ್ಯ ಮಂಡಳಿಯ ಉಪನಿರ್ದೇಶಕಿ ಪವಿತ್ರಾ ಹಾಗೂ ವೃಕ್ಷ ಲಕ್ಷ ಆಂದೋಲನದ ಮುಖ್ಯಸ್ಥ ಅನಂತ ಹೆಗಡೆ ಅಶೀಸರ ಉಪಸ್ಥಿತರಿರಲಿದ್ದಾರೆ.

ಪಶ್ಚಿಮ ಘಟ್ಟದ ಅಧ್ಯಯನ ಕುರಿತಾಗಿ ಪರಿಸರ ವಿಜ್ಞಾನಿಗಳಾದ T.V. Ramachandra ಸೇರಿದಂತೆ ಡಾ. ಕೇಶವ, ಡಾ. ವಾಸುದೇವ, ಡಾ. ಸುಭಾಸಚಂದ್ರನ್‌, ಡಾ. ವಿ.ಎನ್. ನಾಯ್ಕ, ಡಾ. ಪ್ರಕಾಶ ಮೇಸ್ತ, ಡಾ. ಬಾಲಚಂದ್ರ ಸಾಯಿಮನೆ ಹಾಗೂ ಡಾ. ಪ್ರೀತಮ್‌ ಬೆಂಗಳೂರು ವಿಷಯ ಮಂಡನೆ ಮಾಡಲಿದ್ದಾರೆ.

ಇದೇ ಸಂದರ್ಭದಲ್ಲಿ ಜೀವ ವೈವಿಧ್ಯ ರಕ್ಷಣೆಗೆ ಕೊಡುಗೆ ನೀಡಿರುವ ಸಾಧಕರನ್ನು ಸನ್ಮಾನಿಸಲಾಗುವುದು. ಸಾಗರ, ಸೊರಬ, ಶಿರಸಿ ಭಾಗಗಳ ಜೀವವೈವಿಧ್ಯ ಸಮಿತಿಗಳು, ಪಂಚಾಯತ್‌ ಮಟ್ಟದ ಸಮಿತಿಗಳು, ಅರಣ್ಯ ಹಾಗೂ ಪರಿಸರ ಅಧ್ಯಯನಕಾರರು, ಶಿರಸಿ ಅರಣ್ಯ ಕಾಲೇಜು ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ರೈತರು, ಬಿಎಂಸಿ ಹಾಗೂ ವಿಎಎಫ್‌ಸಿ ಸದಸ್ಯರು ಮತ್ತು ಪರಿಸರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share