Friday, June 19, 2026
HomeUncategorizedಬಿಡದಿ ಟೌನ್‌ಶಿಪ್ ಪ್ರಸ್ತಾವನೆ ಕೈಬಿಡಿ: ಗಡಿನಾಡ ರಕ್ಷಣಾ ಸೇನೆ

ಬಿಡದಿ ಟೌನ್‌ಶಿಪ್ ಪ್ರಸ್ತಾವನೆ ಕೈಬಿಡಿ: ಗಡಿನಾಡ ರಕ್ಷಣಾ ಸೇನೆ

, ಜೂ.18: ಸರ್ಕಾರವು ಪ್ರಸ್ತಾಪಿಸಿರುವ ಬಿಡದಿ ಟೌನ್‌ಶಿಪ್ ಯೋಜನೆಯಿಂದ ಹಿಂದೆ ಸರಿದು ರೈತಪರ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಗಡಿನಾಡ ರಕ್ಷಣಾ ಸೇನೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗಡಿನಾಡ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಮುನೀರ್ ಪಾಷಾ ಮಾತನಾಡಿ, ಗ್ರೇಟರ್ ಬೆಂಗಳೂರು ನಿರ್ಮಾಣ ಯೋಜನೆಗೆ ಸ್ಥಳೀಯ ರೈತರು ಹಾಗೂ ವಿವಿಧ ರೈತ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ರೈತರ ಹಿತಾಸಕ್ತಿಗಾಗಿ ತಮ್ಮ ಸಂಘಟನೆ ಬೆಂಬಲವಾಗಿ ನಿಲ್ಲಲು ಸಿದ್ಧವಿದೆ ಎಂದು ತಿಳಿಸಿದರು.ಈ ಯೋಜನೆ ಜಾರಿಯಾದರೆ ಪರಿಸರ ಹಾನಿಯಾಗುವುದರ ಜೊತೆಗೆ ಸಾವಿರಾರು ರೈತರ ಜೀವನಾಧಾರಕ್ಕೂ ಧಕ್ಕೆ ಉಂಟಾಗಲಿದೆ. ಭೂಮಿ ಕಳೆದುಕೊಂಡ ರೈತರು ಜೀವನೋಪಾಯಕ್ಕಾಗಿ ಏನು ಮಾಡಬೇಕು ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕಿದೆ ಎಂದು ಅವರು ಹೇಳಿದರು.ಸೊಂಪಾಗಿ ಬೆಳೆದಿರುವ ಅಡಿಕೆ ಹಾಗೂ ತೆಂಗಿನ ತೋಟಗಳನ್ನು ನಾಶಪಡಿಸುವ ಮೂಲಕ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ. ಜನಹಿತಕ್ಕಾಗಿ ಕಾರ್ಯನಿರ್ವಹಿಸಬೇಕಾದ ಸರ್ಕಾರ ರೈತರ ಸಂಕಷ್ಟವನ್ನು ಅರಿತುಕೊಳ್ಳಬೇಕು ಎಂದು ಪದಾಧಿಕಾರಿಗಳು ಅಭಿಪ್ರಾಯಪಟ್ಟರು.ಸಂಘಟನೆಯ ಮುಖಂಡ ಅಬ್ದುಲ್ ರಷೀದ್ ಮಾತನಾಡಿ, ಪ್ರತಿ ಎಕರೆಗೆ ಎರಡೂವರೆ ಕೋಟಿ ರೂ. ಪರಿಹಾರ ಘೋಷಿಸಿರುವುದರಿಂದ ಮಾತ್ರ ಸಮಸ್ಯೆ ಪರಿಹಾರವಾಗುವುದಿಲ್ಲ. ರೈತರಿಗೆ ಪೂರಕವಾದ ಹಸಿರು ವಾತಾವರಣ ಹಾಗೂ ಶಾಶ್ವತ ಜೀವನಾಧಾರ ಒದಗಿಸುವತ್ತ ಸರ್ಕಾರ ಗಮನಹರಿಸಬೇಕು ಎಂದು ಬೇಸರ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಗಡಿನಾಡ ರಕ್ಷಣಾ ಸೇನೆ ಪದಾಧಿಕಾರಿಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share