ಅನಮೋಡ ಚೆಕ್‌ಪೋಸ್ಟ್ ಬಳಿ ಕಾರು-ವಿಆರ್‌ಎಲ್ ಬಸ್ ಡಿಕ್ಕಿ
ರಾಮನಗರ: ಬೆಳಗಾವಿ–ಪಣಜಿ ರಾಷ್ಟ್ರೀಯ ಹೆದ್ದಾರಿ 4ಎಯ ಅನಮೋಡ ಆರ್‌ಟಿಒ ಚೆಕ್‌ಪೋಸ್ಟ್ ಸಮೀಪದ ಘಾಟ್ ರಸ್ತೆಯಲ್ಲಿ ಅಪಾಯಕಾರಿ ಓವರ್‌ಟೇಕ್ ಮಾಡಲು ಹೋಗಿ ಕಾರೊಂದು ವಿಆರ್‌ಎಲ್ ಬಸ್‌ಗೆ ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಈ ಸಂಬಂಧ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಆರ್‌ಎಲ್ ಕಂಪನಿಯ ಬಸ್ ಚಾಲಕ ದತ್ತುಸಿಂಗ್ ಮಾಣಿಕಸಿಂಗ್ ಠಾಕೂರ್ ನೀಡಿದ ದೂರಿನ ಪ್ರಕಾರ, ಜುಲೈ 31ರಂದು ಮಧ್ಯಾಹ್ನ ಗೋವಾದ ಪಣಜಿಯಿಂದ ಖಾಲಿ ಬಸ್‌ನ್ನು ಬೆಳಗಾವಿಗೆ ಚಾಲನೆ ಮಾಡಿಕೊಂಡು ಬರುತ್ತಿದ್ದರು.
ಸಂಜೆ ಸುಮಾರು 6.15ರ ವೇಳೆಗೆ ಅನಮೋಡ ಆರ್‌ಟಿಒ ಚೆಕ್‌ಪೋಸ್ಟ್ ಸಮೀಪದ ತಿರುವುಗಳಿಂದ ಕೂಡಿದ ಘಾಟ್ ರಸ್ತೆಯಲ್ಲಿ ಎದುರು ದಿಕ್ಕಿನಿಂದ ಬಂದ ಕೆಎ-65/ಎಂ-2921 ಸಂಖ್ಯೆಯ ಕಾರಿನ ಚಾಲಕ ಸುಂದರ ಖೀರಪ್ಪ ತೋರ್ಲೇಕರ ತನ್ನ ಮುಂದಿದ್ದ ವಾಹನವನ್ನು ಓವರ್‌ಟೇಕ್ ಮಾಡುವ ವೇಳೆ ನಿಯಂತ್ರಣ ಕಳೆದುಕೊಂಡು ಬಸ್‌ನ ಬಲಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಅಪಘಾತದ ಪರಿಣಾಮ ಬಸ್ ಹಾಗೂ ಕಾರು ಎರಡಕ್ಕೂ ಹಾನಿಯಾಗಿದ್ದು, ಬಸ್‌ನಲ್ಲಿದ್ದವರು ಹಾಗೂ ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ. ಘಟನೆ ಬಳಿಕ ಬಸ್ ವ್ಯವಸ್ಥಾಪಕರೊಂದಿಗೆ ಸಮಾಲೋಚನೆ ನಡೆಸಿದ ನಂತರ ಚಾಲಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.