Monday, September 7, 2026
Join WhatsApp Group
HomeLocal Newsಕೊಡಸೆಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ

ಕೊಡಸೆಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ

ಯಲ್ಲಾಪುರ: ಕಣ್ಣಿನ ಸಮಸ್ಯೆ ಬಂದರೆ ದೂರದ ನಗರಕ್ಕೆ ಹೋಗಬೇಕು ಎಂಬುದು ಗ್ರಾಮೀಣ ಭಾಗದ ಜನರ ಸಾಮಾನ್ಯ ಸಂಕಷ್ಟ. ಅದರಲ್ಲೂ ವಯಸ್ಸಾದವರು, ಕೂಲಿ ಕಾರ್ಮಿಕರು ಹಾಗೂ ದೂರದ ಹಳ್ಳಿಗಳಲ್ಲಿರುವವರಿಗೆ ಇದು ಇನ್ನಷ್ಟು ಕಷ್ಟ. ಈ ಸಮಸ್ಯೆಗೆ ಪರಿಹಾರವೆಂಬಂತೆ ಯಲ್ಲಾಪುರ ತಾಲೂಕಿನ ಕೊಡಸೆಯಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ 150ಕ್ಕೂ ಹೆಚ್ಚು ಮಂದಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರು.

ಕೊಡಸೆಯ ವಿದ್ಯಾ ಗಜಾನನೋತ್ಸವ ಸಭಾಭವನದಲ್ಲಿ ಒನ್‌ ಲೈಟ್‌ ಎಸ್ಸಿಲಾರ್ ಲಕ್ಸೊಟಿಕಾ ಫೌಂಡೇಶನ್, ಸ್ಪಂದನ ಸೇವಾ ಟ್ರಸ್ಟ್ ಹಡಿನಬಾಳ–ಹೊನ್ನಾವರ, ವಿದ್ಯಾ ಗಜಾನನೋತ್ಸವ ಸಮಿತಿ ಕೊಡಸೆ, ನಂದನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕಣ್ಣೀಗೇರಿ, ಗ್ರಾಮ ಪಂಚಾಯಿತಿ ಕಣ್ಣೀಗೇರಿ ಹಾಗೂ ಊರ ನಾಗರಿಕರ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿತ್ತು.

ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರವಿ ಕೈಟಕರ, ಗಣಪತಿ ಗುಮ್ಮಾನಿ, ಮಂಜುನಾಥ ಪಾಟೀಲ, ವಿ.ಎಸ್. ಭಟ್ಟ ಕಲ್ಲೇಶ್ವರ ಹಾಗೂ ಸ್ಪಂದನ ಸೇವಾ ಟ್ರಸ್ಟ್‌ನ ಗಣಪತಿ ಹೆಗಡೆ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ವಿ.ಎಸ್. ಭಟ್ಟ ಕಲ್ಲೇಶ್ವರ, ಉಚಿತವಾಗಿ ಸೇವೆ ನೀಡುವವರು ಇದ್ದರೂ, ಆ ಸೇವೆ ನಿಜವಾಗಿ ಅಗತ್ಯವಿರುವ ಜನರಿಗೆ ತಲುಪಿಸುವುದು ಮುಖ್ಯ. ಕೊಡಸೆಯ ಜನರು ಈ ಕೆಲಸವನ್ನು ಉತ್ತಮವಾಗಿ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಸ್ಪಂದನ ಸೇವಾ ಟ್ರಸ್ಟ್‌ನ ಗಣಪತಿ ಹೆಗಡೆ ಮಾತನಾಡಿ, ಯಾರೊಬ್ಬರೂ ಕಣ್ಣಿನ ಸಮಸ್ಯೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಗ್ರಾಮೀಣ ಪ್ರದೇಶಗಳಲ್ಲಿಯೂ ಇಂತಹ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ರವಿ ಕೈಟಕರ ಮಾತನಾಡಿ, ಕಣ್ಣಿನ ತಪಾಸಣೆಗಾಗಿ ದೂರದ ನಗರಗಳಿಗೆ ತೆರಳುವುದು ಈ ಭಾಗದ ಜನರಿಗೆ ಸುಲಭವಲ್ಲ. ಹೀಗಾಗಿ ಗ್ರಾಮದಲ್ಲಿಯೇ ತಪಾಸಣಾ ಶಿಬಿರ ಆಯೋಜಿಸಿರುವುದು ಜನರಿಗೆ ನಿಜಕ್ಕೂ ಅನುಕೂಲವಾಗಿದೆ ಎಂದು ಹೇಳಿದರು.

ಶಿಬಿರದಲ್ಲಿ ಡಾ. ಸಂತೋಷ ಅವರು ಸಾರ್ವಜನಿಕರ ಕಣ್ಣುಗಳನ್ನು ತಪಾಸಣೆ ಮಾಡಿ, ಅಗತ್ಯ ಸಲಹೆ ಮತ್ತು ಮಾರ್ಗದರ್ಶನ ನೀಡಿದರು. ಕೊಡಸೆ ಹಾಗೂ ಕನ್ನಡಗಲ್ ಭಾಗದ 150ಕ್ಕೂ ಹೆಚ್ಚು ನಾಗರಿಕರು ಶಿಬಿರದ ಪ್ರಯೋಜನ ಪಡೆದರು.

ಕಾರ್ಯಕ್ರಮದಲ್ಲಿ ಊರಿನ ಹಿರಿಯ ನರಸಿಂಹ ಹೆಗಡೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಪ್ರಶಾಂತ ಹೆಗ್ಗಾರ ಕಾರ್ಯಕ್ರಮ ನಿರ್ವಹಿಸಿದರು. ಗಣಪತಿ ಗುಮ್ಮಾನಿ ಹಾಗೂ ಮಂಜುನಾಥ ಹೆಗಡೆ ಕಾರ್ಯಕ್ರಮ ಸಂಯೋಜಿಸಿದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share