Monday, September 7, 2026
Join WhatsApp Group
HomeCrimeಕ್ಷಣಾರ್ಧದಲ್ಲಿ ₹2.25 ಲಕ್ಷ ಎಗರಿಸಿದ ಸೈಬರ್ ಕಳ್ಳರು

ಕ್ಷಣಾರ್ಧದಲ್ಲಿ ₹2.25 ಲಕ್ಷ ಎಗರಿಸಿದ ಸೈಬರ್ ಕಳ್ಳರು

ಕಾರವಾರ: ಮೊಬೈಲ್‌ ಫೋನ್‌ನಲ್ಲಿ ಯಾವುದೋ ಫೈಲ್‌ಗಳು ಅಪ್‌ಡೇಟ್ ಆಗುತ್ತಿರುವುದು ಕಂಡುಬಂದ ಕೆಲವೇ ಸಮಯದಲ್ಲಿ ಬ್ಯಾಂಕ್ ಖಾತೆ ಹಾಗೂ ಕ್ರೆಡಿಟ್ ಕಾರ್ಡ್‌ನಿಂದ ಒಟ್ಟು 2.25 ಲಕ್ಷ ರೂ ಹಣ ವರ್ಗಾವಣೆಯಾಗಿರುವ ಘಟನೆ ಕಾರವಾರದಲ್ಲಿ ನಡೆದಿದೆ.

ಕಾರವಾರದ ಸೀ-ಬರ್ಡ್ ನೌಕರ ಭೋಜರಾಜ ಹನುಮಂತ ಲಮಾಣಿ (44) ಸೈಬರ್ ವಂಚನೆಗೆ ಒಳಗಾದವರು. ಈ ಸಂಬಂಧ ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭೋಜರಾಜ ಅವರ ಮೊಬೈಲ್‌ ಫೋನ್‌ನ ಡಿಸ್‌ಪ್ಲೇ ಬಂದ್ ಆಗಿದ್ದು, ಮೊಬೈಲ್‌ನಲ್ಲಿ ಯಾವುದೋ ಫೈಲ್‌ಗಳು ಅಪ್‌ಡೇಟ್ ಆಗುತ್ತಿರುವುದು ಅವರಿಗೆ ಕಂಡುಬಂದಿತ್ತು. ಇದಾದ ಕೆಲ ಸಮಯದ ಬಳಿಕ ಅವರ ಮೊಬೈಲ್‌ಗೆ ಬ್ಯಾಂಕ್ ವಹಿವಾಟಿನ ಎಸ್‌ಎಂಎಸ್‌ಗಳು ಬಂದಿವೆ.

ಎಸ್‌ಬಿಐ ಉಳಿತಾಯ ಖಾತೆಯಿಂದ ₹40,000, ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನಿಂದ ₹1.65 ಲಕ್ಷ ಹಾಗೂ ಎಕ್ಸಿಸ್ ಬ್ಯಾಂಕ್ ಉಳಿತಾಯ ಖಾತೆಯಿಂದ ₹20,000 ಹಣವನ್ನು ಅಪರಿಚಿತರು ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಒಟ್ಟು ₹2.25 ಲಕ್ಷ ಹಣ ಕಳೆದುಕೊಂಡಿರುವ ಭೋಜರಾಜ ಅವರು, ತಮ್ಮ ಮೊಬೈಲ್‌ಗೆ ಪ್ರವೇಶ ಪಡೆದು ಹಣ ವರ್ಗಾವಣೆ ಮಾಡಿರುವ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share