Friday, July 24, 2026
Join WhatsApp Group
HomeUncategorizedಪಿರಿಯಾಪಟ್ಟಣದಲ್ಲಿ ಪೌರಾಣಿಕ ನಾಟಕ: ಏ.18ರಂದು ‘ಶನಿ ಪ್ರಭಾವ ಅಥವಾ ರಾಜ ವಿಕ್ರಮ’ ಪ್ರದರ್ಶನ

ಪಿರಿಯಾಪಟ್ಟಣದಲ್ಲಿ ಪೌರಾಣಿಕ ನಾಟಕ: ಏ.18ರಂದು ‘ಶನಿ ಪ್ರಭಾವ ಅಥವಾ ರಾಜ ವಿಕ್ರಮ’ ಪ್ರದರ್ಶನ

ಮೈಸೂರು :ಪಿರಿಯಾಪಟ್ಟಣ ಶ್ರೀ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ, ಕಂದೇಗಾಲ ಇವರ ವತಿಯಿಂದ ಏಪ್ರಿಲ್ 18ರಂದು ಪಿರಿಯಾಪಟ್ಟಣದಲ್ಲಿ ‘ಶನಿ ಪ್ರಭಾವ ಅಥವಾ ರಾಜ ವಿಕ್ರಮ’ ಎಂಬ ಪೌರಾಣಿಕ ನಾಟಕವನ್ನು ಆಯೋಜಿಸಲಾಗಿದೆ.

ಅಂದು ರಾತ್ರಿ 7.30 ಗಂಟೆಗೆ ಪಿರಿಯಾಪಟ್ಟಣದ ಶ್ರೀ ಮಸಣಿಕಮ್ಮ ದೇವಾಲಯದ ಬಳಿ ಶ್ರೀ ಶನಿ ದೇವರ ಪೂಜಾ ಕಾರ್ಯಕ್ರಮದ 16ನೇ ವರ್ಷದ ಪ್ರಯುಕ್ತ, ಸಾಲಿಗ್ರಾಮದ ಶ್ರೀ ನಟರಾಜ ಡ್ರಾಮಾ ಸೀನ್ಸ್ ಭವ್ಯ ರಂಗಮಂಟಪದಲ್ಲಿ ನಾಟಕ ಪ್ರದರ್ಶನ ನಡೆಯಲಿದೆ.ವೇದಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ನಿತಿನ್ ವೆಂಕಟೇಶ್ ನೆರವೇರಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಮುಲ್ ಮಾಜಿ ಅಧ್ಯಕ್ಷರಾದ ಪಿ.ಎಮ್. ಪ್ರಸನ್ನ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಮತ್ತು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.ಪೂಜಾ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕೂಡ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ನಾಟಕ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಯಜಮಾನರು ಮತ್ತು ಗ್ರಾಮಸ್ಥರು ಕೋರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share