Friday, July 24, 2026
Join WhatsApp Group
HomeUncategorizedವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು

ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು

ಮೈಸೂರು : ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಸಮೀಪದ ಬಿ.ಟಿ.ಎಂ ಕೊಪ್ಪಲು ಗ್ರಾಮದಲ್ಲಿ ಮನೆಯ ಹಿಂದೆ ಕ್ರಿಕೆಟ್ ಆಡುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಬಾಲಕ ಧನಂಜಯ (13) ಶನಿವಾರ ಮೃತಪಟ್ಟಿದ್ದಾರೆ .

ಇವರು ಬೆಟ್ಟದಪುರ ಪಬ್ಲಿಕ್ ಶಾಲೆಯಲ್ಲಿ 6ನೇ ತರಗತಿಯನ್ನು ಓದಿ ಈ ವರ್ಷ ಉತ್ತೀರ್ಣರಾಗಿದ್ದರು . ಮಧ್ಯಾಹ್ನ 3.30ರ ವೇಳೆಗೆ ಮನೆಯ ಹಿಂದೆ ಮಕ್ಕಳ ಜೊತೆ ಕ್ರಿಕೆಟ್ ಆಡುತ್ತಿದ್ದಾಗ ಬಾಲ್ ತರುವ ಸಲುವಾಗಿ ತಂತಿ ಬೇಲಿಯ ಹತ್ತಿರ ಹೋಗಿದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿದೆ. ತಕ್ಷಣ ಅಲ್ಲಿದ್ದ ಕೆಲಸಗಾರರು ಬಾಲಕನನ್ನು ವಿದ್ಯುತ್ ಸಂಪರ್ಕದಿಂದ ಬಿಡಿಸಿ, ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದ್ದಾರೆ,

ಧನಂಜಯನನ್ನು ತಕ್ಷಣ ಪಿರಿಯಾಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ , ವೈದ್ಯರು ಪರಿಶೀಲಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ . ಬಾಲಕನ ಎರಡು ಕಾಲಿನ ಮಂಡಿ ಹಾಗೂ ಬಲಗೈ ಬೆರಳಿಗೆ ಗಾಯಗಳಾಗಿದೆ, ಎಂದು ಮೃತರ ಚಿಕ್ಕಪ್ಪ ನಟರಾಜ ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share