Monday, September 7, 2026
Join WhatsApp Group
HomeLocal Newsಆತಂಕಕಾರಿ ಮರಗಳ ಬಹಿರಂಗ ಹರಾಜು ಜು. 13ಕ್ಕೆ

ಆತಂಕಕಾರಿ ಮರಗಳ ಬಹಿರಂಗ ಹರಾಜು ಜು. 13ಕ್ಕೆ

ಕಾರವಾರ/ಯಲ್ಲಾಪುರ: ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಯಲ್ಲಾಪುರ ವಿಭಾಗದ ಕಿರವತ್ತಿ ವಲಯ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿರುವ ಆತಂಕಕಾರಿ ಮರಗಳನ್ನು ಜುಲೈ 13ರಂದು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.

ಕಿರವತ್ತಿ ವಲಯದ ಕಿರವತ್ತಿ, ಕೋಳಿಕೇರಿ ಹಾಗೂ ಹುಣಶೆಟ್ಟಿಕೊಪ್ಪ ಶಾಖೆಗಳ ವ್ಯಾಪ್ತಿಯ ಮದನೂರ ಗಾಂವಠಾಣಾದಲ್ಲಿ ಶ್ರೀ ಗ್ರಾಮದೇವಿ ದೇವಸ್ಥಾನ, ಅನ್ವರ್ ಕಾಸಿಂ ಶೇಖ್, ಮೀರ ಮಹಮ್ಮದ್ ಗೌಸ್ ಮೀರ ರಜಾಕ್, ವಿನಾಯಕ ತಿನ್ನೇಕರ (ಹುಣಶೆಟ್ಟಿಕೊಪ್ಪ), ಸದಾನಂದ ತಮ್ಮು ಕೇಸರಕರ, ಫಕೀರಪ್ಪ ಕಾಸಾರ, ಅನಂತ ಕಲ್ಯಾಣಕರ ಹಾಗೂ ಪುಂಡಲೀಕ ವಾರೇಗೌಡ ಅವರ ಮನೆಗಳ ಸಮೀಪ ಇರುವ ಗಾಂವಠಾಣಾ ಪ್ರದೇಶಗಳಲ್ಲಿ ಮತ್ತು ಡೊಮಗೇರಿ ಗಸ್ತಿನ ಡೊಮಗೇರಿ ರಸ್ತೆ, ಖಾರವಾಡ ಅಂಗನವಾಡಿ ಕೇಂದ್ರ ಹಾಗೂ ಶಾಲೆ ಸಮೀಪದ ಅಪಾಯಕಾರಿ ಮರಗಳನ್ನು ಹರಾಜು ಮಾಡಲಾಗುತ್ತದೆ.

ಯಲ್ಲಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಆದೇಶದಂತೆ ಜುಲೈ 13ರಂದು ಬೆಳಿಗ್ಗೆ 11 ಗಂಟೆಗೆ ಆಯಾ ಶಾಖೆಗಳ ವ್ಯಾಪ್ತಿಯಲ್ಲಿ ಯಲ್ಲಾಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಬಹಿರಂಗ ಹರಾಜು ನಡೆಯಲಿದೆ ಎಂದು ಕಿರವತ್ತಿ ವಲಯ ಅರಣ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share