Thursday, July 23, 2026
Join WhatsApp Group
HomeHealthರಾತ್ರಿ ಮಲಗುವ ಮುನ್ನ ಮೊಬೈಲ್‌ ನೋಡಿದಿರಾ?!

ರಾತ್ರಿ ಮಲಗುವ ಮುನ್ನ ಮೊಬೈಲ್‌ ನೋಡಿದಿರಾ?!

ಇಂದು ಹೆಚ್ಚಿನವರಿಗೆ ರಾತ್ರಿ ಮಲಗುವ ಮುನ್ನ ಕೊನೆಯ ಸಂಗಾತಿಯೇ ಮೊಬೈಲ್‌. ಕೆಲವರು ರೀಲ್ಸ್‌ ನೋಡುತ್ತಾ ಮಲಗುತ್ತಾರೆ, ಇನ್ನು ಕೆಲವರು ಚಾಟ್‌, ಯೂಟ್ಯೂಬ್‌ ಅಥವಾ ಸುದ್ದಿಗಳಲ್ಲಿ ಮುಳುಗಿರುತ್ತಾರೆ. ಆದರೆ ಈ ಅಭ್ಯಾಸವೇ ನಿಧಾನವಾಗಿ ಆರೋಗ್ಯ ಹಾಳು ಮಾಡುತ್ತಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ಮೊಬೈಲ್‌ ಪರದೆಯಿಂದ ಹೊರಬರುವ ಬ್ಲೂ ಲೈಟ್‌ ನಮ್ಮ ಮೆದುಳಿಗೆ ಇನ್ನೂ ಹಗಲು ಎನ್ನುವ ಸಂದೇಶ ನೀಡುತ್ತದೆ. ಇದರ ಪರಿಣಾಮ ದೇಹದಲ್ಲಿ ನಿದ್ರೆ ತರಿಸುವ ಮೆಲಟೋನಿನ್‌ ಹಾರ್ಮೋನ್‌ ಕಡಿಮೆಯಾಗುತ್ತದೆ. ಹೀಗಾಗಿ ಬೇಗ ನಿದ್ರೆ ಬರುವುದಿಲ್ಲ. ನಿದ್ರೆ ಬಂದರೂ ಅದು ಗಾಢವಾಗಿರುವುದಿಲ್ಲ.

ಅದೇ ಕಾರಣಕ್ಕೆ ಹಲವರಿಗೆ ಬೆಳಿಗ್ಗೆ ಎದ್ದರೂ ದೇಹ ಸುಸ್ತಾಗಿರುತ್ತದೆ. ದಿನವಿಡೀ ಒತ್ತಡ, ಕೋಪ, ಗಮನ ಕೆಂದ್ರೀಕರಿಸಲು ತೊಂದರೆ ಕಾಣಿಸಬಹುದು. ವಿದ್ಯಾರ್ಥಿಗಳಲ್ಲಿ ಓದಿನ ಮೇಲೂ ಪರಿಣಾಮ ಬೀಳುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.

ಇನ್ನೊಂದು ದೊಡ್ಡ ಸಮಸ್ಯೆ ಎಂದರೆ “ಡೂಮ್‌ ಸ್ಕ್ರೋಲಿಂಗ್‌”. ಅಂದರೆ, “ಇನ್ನೊಂದು ವಿಡಿಯೋ ನೋಡಿ ಮಲಗೋಣ” ಎಂದು ಆರಂಭಿಸಿ ಗಂಟೆಗಟ್ಟಲೆ ಫೋನ್‌ ಬಳಸುವುದು. ಇದರ ಪರಿಣಾಮ ನಿದ್ರೆಯ ಸಮಯ ಕಡಿಮೆಯಾಗುತ್ತಾ ಹೋಗುತ್ತದೆ.

ಕೆಲವರು ತಲೆಯ ಪಕ್ಕದಲ್ಲೇ ಫೋನ್‌ ಇಟ್ಟು ಮಲಗುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮಧ್ಯರಾತ್ರಿ ನೋಟಿಫಿಕೇಶನ್‌ ಬಂದರೂ ಮೆದುಳು ಎಚ್ಚರಗೊಳ್ಳುತ್ತದೆ. ಇದು ನಿದ್ರೆಯ ಗುಣಮಟ್ಟ ಕೆಡಿಸುತ್ತದೆ.

ಆರೋಗ್ಯ ತಜ್ಞರ ಸಲಹೆಯಂತೆ, ಮಲಗುವ ಕನಿಷ್ಠ 30 ನಿಮಿಷ ಮೊದಲು ಮೊಬೈಲ್‌ ಬಳಕೆ ನಿಲ್ಲಿಸುವುದು ಉತ್ತಮ. ಅದರ ಬದಲು ಪುಸ್ತಕ ಓದುವುದು, ಸಂಗೀತ ಕೇಳುವುದು ಅಥವಾ ಸರಳ ಧ್ಯಾನ ಮಾಡುವುದರಿಂದ ಉತ್ತಮ ನಿದ್ರೆ ಸಾಧ್ಯ. ಅಂದಹಾಗೆ, ರಾತ್ರಿ ಮಲಗುವ ಮುನ್ನ ನೀವೂ ಮೊಬೈಲ್‌ ನೋಡಿದಿರಾ?!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share