Saturday, May 30, 2026
HomeStateಯಲ್ಲಾಪುರದಲ್ಲಿ ಭೀಕರ ಅಪ*ಘಾತ: ರಿಯಾಲಿಟಿ ಶೋ ಸ್ಪರ್ಧಿ ಬಾವತೀಶ್ ಸ್ಥಳದಲ್ಲೇ ಸಾ*ವು

ಯಲ್ಲಾಪುರದಲ್ಲಿ ಭೀಕರ ಅಪ*ಘಾತ: ರಿಯಾಲಿಟಿ ಶೋ ಸ್ಪರ್ಧಿ ಬಾವತೀಶ್ ಸ್ಥಳದಲ್ಲೇ ಸಾ*ವು

ಯಲ್ಲಾಪುರ: ತಾಲೂಕಿನ ಕೋಳಿಕೆರೆ ಸಮೀಪ ಭೀಕರ ರಸ್ತೆ ಅಪಘಾತದಲ್ಲಿ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಬಾವತೀಶ್ (28) ಅವರು ಮೃ*ತಪಟ್ಟ ಘಟನೆ ನಡೆದಿದೆ.

ಹಳಿಯಾಳ ತಾಲೂಕಿನ ವಾಡಗರಡೊಳ್ಳಿ ನಿವಾಸಿಯಾದ ಬಾವತೀಶ್ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ರಸ್ತೆ ಬದಿಯಲ್ಲಿ ನಿಂತಿದ್ದ KSRTC ಬಸ್‌ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ತಿಳಿದುಬಂದಿದೆ.

ಡಿಕ್ಕಿಯ ತೀವ್ರತೆಗೆ ಅಪಘಾತವಾದ ತಕ್ಷಣ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರು ರಸ್ತೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.ಬಾವತೀಶ್ ಅವರು ಜನಪ್ರಿಯ ರಿಯಾಲಿಟಿ ಶೋ ಹಳ್ಳಿ ಹೈದ ಪ್ಯಾಟೆಗ್ ಬಂದ ಸೀಸನ್-3ರಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು. ಅವರ ಅನಿರೀಕ್ಷಿತ ನಿಧನ ಕುಟುಂಬಸ್ಥರು ಹಾಗೂ ಅಭಿಮಾನಿ ವಲಯದಲ್ಲಿ ಶೋಕದ ವಾತಾವರಣ ಮೂಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share