Ad
Ad
Ad
Home Crime ಯಲ್ಲಾಪುರ | ಅನಾರೋಗ್ಯದ ಬದುಕಿಗೆ ವಿದಾಯ ಹೇಳಿದ ಕೃಷಿಕ 

ಯಲ್ಲಾಪುರ | ಅನಾರೋಗ್ಯದ ಬದುಕಿಗೆ ವಿದಾಯ ಹೇಳಿದ ಕೃಷಿಕ 

0
9

ಯಲ್ಲಾಪುರ: ಅನಾರೋಗ್ಯದಿಂದ ಬಳಲುತ್ತಿದ್ದ 63 ವರ್ಷದ ಕೃಷಿಕರೊಬ್ಬರು ಆ*ತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲ್ಲಾಪುರ ತಾಲೂಕಿನ ಲಾಲಗುಳಿ ಗ್ರಾಮದಲ್ಲಿ ನಡೆದಿದೆ.

ಮೃ*ತರನ್ನು ಕೃಷ್ಣ ಶಿವಾ ಮರಾಠಿ (63) ಎಂದು ಗುರುತಿಸಲಾಗಿದೆ. ಅವರು ಲಾಲಗುಳಿ ಹಳಬೈಲ್ ಗ್ರಾಮದ ನಿವಾಸಿಯಾಗಿದ್ದು, ಕೃಷಿ ಕೆಲಸ ಮಾಡಿಕೊಂಡಿದ್ದರು.

ಪೊಲೀಸ್ ದೂರಿನ ಪ್ರಕಾರ, ಕೃಷ್ಣ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇದೇ ಕಾರಣಕ್ಕೆ ಬೇಸತ್ತು ಆ.30ರ ರಾತ್ರಿ 9 ಗಂಟೆಯಿಂದ ಆ.31ರ ಬೆಳಗ್ಗೆ 6.30ರ ನಡುವಿನ ಅವಧಿಯಲ್ಲಿ ಮನೆಯ ಪಕ್ಕದ ಗಿಡದ ಕೊಂಬೆಗೆ ನೇಣು ಹಾಕಿಕೊಂಡು ಮೃ*ತಪಟ್ಟಿದ್ದಾರೆ ಎನ್ನಲಾಗಿದೆ.

ಈ ಕುರಿತು ಮೃತರ ಪುತ್ರ ರವಿ ಕೃಷ್ಣ ಮರಾಠಿ ಅವರು ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಂದೆಯ ಸಾ_ವಿನ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!